ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ 10 ಶ್ರೀಮಂತ ಸಂಸದರು ಇವರೇ ನೋಡಿ..! - Mahanayaka
10:35 PM Tuesday 16 - September 2025

ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ 10 ಶ್ರೀಮಂತ ಸಂಸದರು ಇವರೇ ನೋಡಿ..!

loksabha
13/06/2024

ದೇಶದಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಈ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ 543 ಸಂಸದರ ಪೈಕಿ 503 ಮಂದಿ ಕೋಟ್ಯಾಧಿಪತಿಗಳು. ಇವರೆಲ್ಲರ ಆಸ್ತಿ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚು. ದೇಶದ ಅತ್ಯಂತ ಶ್ರೀಮಂತ ಸಂಸದರ ಆಸ್ತಿ ಸಾವಿರಾರು ಕೋಟಿ ರೂಪಾಯಿ ಇದೆ. ಹೀಗಾಗಿ ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ 10 ಶ್ರೀಮಂತ ಸಂಸದರ ಪಟ್ಟಿ ಇಲ್ಲಿದೆ.


Provided by

ಲೋಕಸಭಾ ಚುನಾವಣೆಯಲ್ಲಿ ಎನ್‌ ಡಿಎ ಮೈತ್ರಿಕೂಟ ಭರ್ಜರಿಗೆ ಗೆಲುವು ದಾಖಲಿಸಿದ್ದು, ಬಿಜೆಪಿಗೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಎನ್‌ ಡಿಎ ಒಕ್ಕೂಟದ ಮಿತ್ರಪಕ್ಷಗಳ ಜೊತೆ ಸೇರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆಯಾಗಿದೆ.

ಈ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ 543 ಸಂಸದರ ಪೈಕಿ 503 ಮಂದಿ ಕೋಟ್ಯಾಧಿಪತಿಗಳು. ಇವರೆಲ್ಲರ ಆಸ್ತಿ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚು.  ಅಲ್ಲದೇ ಸಾಕಷ್ಟು ಸಂಸದರ ಆಸ್ತಿ ಸಾವಿರಾರು ಕೋಟಿ ರೂಪಾಯಿಯಾಗಿದೆ.

ದೇಶದ 10 ಶ್ರೀಮಂತರ ಸಂಸದರ ಪಟ್ಟಿ ಇಲ್ಲಿದೆ ನೋಡಿ:

ಡಾ. ಚಂದ್ರಶೇಖರ್ ಪೆಮ್ಮಸಾನಿ: ಆಂಧ್ರಪ್ರದೇಶದ ಗುಂಟೂರಿನಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ ನಲ್ಲಿ  ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರ ಆಸ್ತಿಯ ನಿವ್ವಳ ಮೌಲ್ಯ 5705 ಕೋಟಿ. ಅಂದ ಹಾಗೆ ಇವರು ಮೋದಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರೂ ಆಗಿದ್ದಾರೆ.

ಕೊಂಡಾ ವಿಶ್ವೇಶ್ವರ ರೆಡ್ಡಿ: ತೆಲಂಗಾಣದ ಚೆಲ್ಲೆವಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಿಂದ ಸ್ಪರ್ಧಿಸಿ ಸಂಸದರಾಗಿರುವ ಕೊಂಡಾ ವಿಶ್ವೇಶ್ವರ ರೆಡ್ಡಿ ಅವರ ಆಸ್ತಿ ಮೌಲ್ಯ 4,568 ಕೋಟಿ ರೂಪಾಯಿಯಾಗಿದ್ದು, ಶ್ರೀಮಂತ ಸಂಸದರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಇವರು ಭಾರತ್ ರಾಷ್ಟ್ರ ಸಮಿತಿ ಟಿಕೆಟ್‌ ನಿಂದ ಗೆದ್ದಿದ್ದಾರೆ.

ನವೀನ್ ಜಿಂದಾಲ್: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಪುತ್ರ ನವೀನ್ ಜಿಂದಾಲ್ ಅವರು ಕುರುಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಲ್ಲಿ ಗೆದ್ದಿದ್ದಾರೆ. ಜಿಂದಾಲ್ ಸ್ಟೀಲ್ ಮತ್ತು ಪವರ್ ಅಧ್ಯಕ್ಷ ನವೀನ್ ಜಿಂದಾಲ್ ಅವರ ನಿವ್ವಳ ಮೌಲ್ಯ 1241 ಕೋಟಿ ರೂಪಾಯಿ. ಇವರು ಮೂರನೇ ಶ್ರೀಮಂತ ಸಂಸದರಾಗಿದ್ದಾರೆ.

ವೇಮಿರೆಡ್ಡಿ ಪ್ರಭಾಕರ ರೆಡ್ಡಿ: ವೇಮಿರೆಡ್ಡಿ ಪ್ರಭಾಕರ ರೆಡ್ಡಿ ವಿಪಿಆರ್ ಮೈನಿಂಗ್ ಇನ್ಫ್ರಾ ಸಂಸ್ಥಾಪಕರು. ಅವರ ಒಟ್ಟು ಆಸ್ತಿ 716 ಕೋಟಿ ರೂಪಾಯಿ. ಅವರು ಆಂಧ್ರಪ್ರದೇಶದ ನೆಲ್ಲೂರು ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಇವರು ನಾಲ್ಕನೇ ಶ್ರೀಮಂತ ಸಂಸದರಾಗಿದ್ದಾರೆ.

ಸಿಎಂ ರಮೇಶ್: ಬಿಜೆಪಿ ನಾಯಕ ಸಿಎಂ ರಮೇಶ್ ಈ ಹಿಂದೆ ಆಂಧ್ರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿದ್ದರು. ಈ ಬಾರಿ ಅವರು ಆಂಧ್ರಪ್ರದೇಶದ ಅನಕಪಲ್ಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಆಸ್ತಿ 497 ಕೋಟಿ ರೂಪಾಯಿ.

ಜ್ಯೋತಿರಾದಿತ್ಯ ಸಿಂಧಿಯಾ: ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿ 424 ಕೋಟಿ ರೂಪಾಯಿ. ಅವರು ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಿಂದಿನ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಈ ಬಾರಿ  ಟೆಲಿಕಾಂ ಸಚಿವರನ್ನಾಗಿ ಮಾಡಲಾಗಿದೆ.

ಛತ್ರಪತಿ ಶಾಹು ಮಹಾರಾಜ್: ಛತ್ರಪತಿ ಶಾಹುಜಿ ಮಹಾರಾಜರು ಕೊಲ್ಲಾಪುರದ ರಾಜಮನೆತನದ ಸದಸ್ಯರಾಗಿದ್ದಾರೆ. ಅವರ ಸಂಪತ್ತು 342 ಕೋಟಿ ರೂಪಾಯಿ. ಲೋಕಸಭೆ ಚುನಾವಣೆಯಲ್ಲಿ ಅವರು ಮಹಾರಾಷ್ಟ್ರದ ಕೊಲ್ಲಾಪುರ ಕ್ಷೇತ್ರದಿಂದ ಗೆದ್ದಿದ್ದರು.

ಶ್ರೀಭರತ್ ಮಾತುಕುಮಿಲ್ಲಿ: ವಿಶಾಖಪಟ್ಟಣಂ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಿಂದ ಶ್ರೀಭರತ್ ಮತುಕುಮಿಲಿ ಗೆದ್ದಿದ್ದಾರೆ. ಅವರ ಆಸ್ತಿ 298 ಕೋಟಿ ರೂಪಾಯಿ.

ಹೇಮಾ ಮಾಲಿನಿ: ಖ್ಯಾತ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಲ್ಲಿ ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಆಸ್ತಿ 278 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ.

 ಡಾ.ಪ್ರಭಾ ಮಲ್ಲಿಕಾರ್ಜುನ್: ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ ನಿಂದ ಆಯ್ಕೆಯಾದ ನೂತನ ಸಂಸದೆಯಾಗಿದ್ದಾರೆ. ಇವರು ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಸಂಪತ್ತು 241 ಕೋಟಿ ರೂಪಾಯಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ