ಮಂಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ - Mahanayaka

ಮಂಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ

pejavara
18/06/2024


Provided by

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ- -ಎಕ್ಕಾರು ಗ್ರಾಮ ಸಮಿತಿಯ “ಸರ್ವ ಸದಸ್ಯರ ಸಭೆ”ಯನ್ನು ಕೆಂಚಗುಡ್ಡೆ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.

ದ.ಸಂ.ಸ. ಮಂಗಳೂರು ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು ಮಾತನಾಡಿ “ಗ್ರಾಮೀಣ ಭಾಗಗಳಲ್ಲಿರುವ ದಲಿತ, ಶೋಷಿತ ಸಮುದಾಯಗಳು ಇವತ್ತಿಗೂ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯಿಂದಾಗಿ ಸ್ಥಳೀಯ ಸರಕಾರಗಳು ನಮ್ಮಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿವಲ್ಲಿ ನಿರ್ಲಕ್ಷ್ಯವನ್ನು ವಹಿಸುತ್ತಿದೆ. ನಾವು ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಹೋರಾಟದ ಮಾರ್ಗದಿಂದಲೇ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಸಂಘಟಿತರಾಗುವ ಅನಿವಾರ್ಯತೆ ಇದೆ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಶೋಷಿತ ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ನಮ್ಮ ಸಮುದಾಯವು ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮೂಲಕ  ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಸಂಘಟನಾ ಸಂಚಾಲಕರಾದ ರವಿ ಎಸ್. ಪೇಜಾವರ ಮಾತನಾಡಿ “ಸಂಘಟನೆಯ ಕಾರ್ಯಕರ್ತರು, ಪದಾಧಿಕಾರಿಗಳು ಶಿಸ್ತುಬದ್ಧರಾಗಿರಬೇಕು, ಯಾವುದೇ ಸಮಾಜಘಾತುಕ ಹಾಗೂ ಕೋಮು ಪ್ರಚೋದಕ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳಬಾರದು. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅಂಬೇಡ್ಕರ್ ವಿಚಾರಧಾರೆಗಳಿಗೆ ಬದ್ಧರಾಗಿರಬೇಕು ಎಂದರು.

ಸಭೆಯಲ್ಲಿ ಹಾಲಿ ಗ್ರಾಮ ಸಮಿತಿಯನ್ನು ವಿಸರ್ಜಿಸಿ ನೂತನ ಗ್ರಾಮ ಸಮಿತಿಯನ್ನು ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಸಂಚಾಲಕರಾಗಿ ಗಣೇಶ್ ಕೆಂಚಗುಡ್ಡೆ, ಸಂಘಟನಾ ಸಂಚಾಲಕರಾಗಿ ಸುದರ್ಶನ್ ಕೆಂಚಗುಡ್ಡೆ, ವಾಸು ತೆಂಕ ಎಕ್ಕಾರು, ಸೌಮ್ಯ ಸುರೇಶ್ ಕೆಂಚಗುಡ್ಡೆ, ರಾಜು ತೆಂಕ ಎಕ್ಕಾರು, ಮೋಹನ್ ಕೆಂಚಗುಡ್ಡೆ, ಖಜಾಂಚಿಯಾಗಿ ಉದಯ ತೆಂಕ ಎಕ್ಕಾರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೋಗೀಶ್ ತೆಂಕ ಎಕ್ಕಾರು, ವಸಂತ ಕೆಂಚಗುಡ್ಡೆ, ಸುಧಾಕರ್ ಮುಗೇರಬೆಟ್ಟು, ಸುಶೀಲಾ ಕೆಂಚಗುಡ್ಡೆ, ಮಂಜುನಾಥ್ ಕೆಂಚಗುಡ್ಡೆ, ಹಾಗೂ ದೀಪಕ್ ಮೇಲೆಕ್ಕಾರು ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ದ.ಸಂ.ಸ. ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು, ಮಂಗಳೂರು ತಾಲೂಕು ಸಂಘಟನಾ ಸಂಚಾಲಕರಾದ ದೊಂಬಯ್ಯ ಕಟೀಲು, ಕೃಷ್ಣ ಕೆ. ಎಕ್ಕಾರು, ಪರಮೇಶ್ವರ್ ತೆಂಕ ಎಕ್ಕಾರು ಮುಂತಾದವರು ಉಪಸ್ಥಿತರಿದ್ದರು. ಪರಮೇಶ್ವರ್ ಸ್ವಾಗತಿಸಿ, ಮೋಹನ್ ಕೆಂಚಗುಡ್ಡೆ ಧನ್ಯವಾದ ಸಮರ್ಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ