ಗೋರಖ್ ಪುರಕ್ಕೆ ಹೋದ್ರು ಯೋಗಿಯನ್ನು ಭೇಟಿ ಮಾಡದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್: ಯುಪಿ ಸಿಎಂಗೆ ಟೆನ್ಸನ್ - Mahanayaka

ಗೋರಖ್ ಪುರಕ್ಕೆ ಹೋದ್ರು ಯೋಗಿಯನ್ನು ಭೇಟಿ ಮಾಡದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್: ಯುಪಿ ಸಿಎಂಗೆ ಟೆನ್ಸನ್

18/06/2024


Provided by

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೋರಖ್‌ಪುರದ ಐದು ದಿನಗಳ ಭೇಟಿ ಮುಗಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿಯಾಗದೆ ಇರುವುದು ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎನ್ನುವ ಊಹಾಪೋಹಗಳಿಗೆ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಅವಧ್, ಕಾಶಿ, ಕಾನ್ಪುರ್ ಮತ್ತು ಗೋರಖ್‌ಪುರದಿಂದ ಆರ್‌ಎಸ್‌ಎಸ್ ಕಾರ್ಯಕರ್ತರ ಸುಮಾರು ಅರ್ಧ ಡಜನ್ ಸಭೆಗಳನ್ನು ಉದ್ದೇಶಿಸಿ ಭಾಗವತ್ ಮಾತನಾಡಿದ್ದಾರೆ.
ಭಾಗವತ್ ಗೋರಖ್‌ಪುರದ ಮಣಿರಾಮ್ ಚಿಯುತಾಹ ಪ್ರದೇಶದಲ್ಲಿ ಎಸ್.ವಿ.ಎಂ. ಪಬ್ಲಿಕ್ ಸ್ಕೂಲ್, ಆದಿತ್ಯನಾಥ್ ನೇತೃತ್ವದ ಗೋರಖನಾಥ ದೇವಸ್ಥಾನದಿಂದ ಕೇವಲ 12 ಕಿ.ಮೀ. ದೂರದಲ್ಲಿದೆ. ಆದರೆ, ಅವರು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ, ಅಂತಹ ಭೇಟಿಯ ಎಲ್ಲ ವಿನಂತಿಗಳನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಗೋರಖ್‌ಪುರಕ್ಕೆ ಭಾಗವತ್ ಆಗಮಿಸಿದ ದಿನವಾದ ಬುಧವಾರದಂದು ಆದಿತ್ಯನಾಥ್ ಅವರನ್ನು ಜೂನ್ 15 ರಂದು ಭೇಟಿಯಾಗಲಿದ್ದಾರೆ ಎಂದು ತಿಳಿಸಲಾಗಿತ್ತು ಎಂದು ಹಲವು ಸಂಘ ಮತ್ತು ಬಿಜೆಪಿ ಮುಖಂಡರು ಈ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಆದಿತ್ಯನಾಥ್ ಶನಿವಾರ ಮತ್ತು ಭಾನುವಾರ ಅವರ ದೇವಸ್ಥಾನದಲ್ಲಿದ್ದರೂ ಅಂತಹ ಯಾವುದೇ ಸಭೆ ನಡೆಯಲಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ