ಮೋದಿ ಸರ್ಕಾರ ಶೀಘ್ರವೇ ಪತನ: ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿಕೆ

ಜೂನ್ 9ರಂದು ಅಧಿಕಾರಕ್ಕೇರಿದ ಮೋದಿ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ ಮತ್ತು ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ. ತನ್ನ ಪಕ್ಷವನ್ನು ನಾಶ ಮಾಡಲು ಹೊರಟವರ ಜೊತೆ ತಾನು ಎಂದೂ ಹೋಗಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.
ಎನ್ ಡಿ ಎ ಜೊತೆ ಠಾಕ್ರೆ ಅವರು ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಊಹಾಪೋಹದ ನಡುವೆಯೇ ಅವರ ಈ ಹೇಳಿಕೆ ಹೊರ ಬಿದ್ದಿದೆ.
ಬಿಜೆಪಿ ತನ್ನ ಸೋಲನ್ನು ಜನರ ಮನಸ್ಸಿನಿಂದ ಮರೆಮಾಡುವುದಕ್ಕಾಗಿ ನಾವು ಅವರ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂಬ ವದಂತಿಯನ್ನು ಹರಡುತ್ತಿದೆ. ಶಿವಸೇನೆಯನ್ನೇ ಸರ್ವನಾಶ ಮಾಡಲು ಶ್ರಮಿಸಿದವರ ಜೊತೆ ನಾವು ಎಂದೂ ಹೋಗಲ್ಲ. ಟಿ ಡಿ ಪಿ ಮತ್ತು ಜೆಡಿಎಸ್ ಜೊತೆಗಿನ ಅವರ ಮೈತ್ರಿಗೆ ಹೆಚ್ಚು ಆಯುಷ್ಯವಿಲ್ಲ. ಶೀಘ್ರದಲ್ಲಿಯೇ ಮೋದಿ ಸರಕಾರ ಕುಸಿಯಲಿದೆ. ಇಂಡಿಯಾ ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth