ರೀಲ್ಸ್ ಗಾಗಿ ಕಟ್ಟಡದ ಮೇಲ್ಭಾಗದಿಂದ ನೇತಾಡಿದ್ರು: ಯುವಕ, ಯುವತಿ ವಿರುದ್ಧ ಕೇಸ್ ಫೈಲ್ - Mahanayaka

ರೀಲ್ಸ್ ಗಾಗಿ ಕಟ್ಟಡದ ಮೇಲ್ಭಾಗದಿಂದ ನೇತಾಡಿದ್ರು: ಯುವಕ, ಯುವತಿ ವಿರುದ್ಧ ಕೇಸ್ ಫೈಲ್

21/06/2024


Provided by

ಕಟ್ಟಡದ ಮೇಲ್ಭಾಗದಿಂದ ನೇತಾಡುತ್ತಾ ರೀಲ್ಸ್ ಗಾಗಿ ಚಿತ್ರೀಕರಣ ಮಾಡಿದ ಯುವತಿ ಮತ್ತು ಆಕೆಯ ಗೆಳೆಯನ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀವವನ್ನು ಅಪಾಯಕ್ಕೊಡ್ಡಿದ ಅಪರಾಧದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ಯುವಕ ಮತ್ತು ಯುವತಿ ಪುಣೆಯವರೇ ಆಗಿದ್ದು ಅತ್ಯಂತ ಅಪಾಯಕಾರಿ ರೀತಿಯಲ್ಲಿ ರೀಲ್ಸ್ ಗಾಗಿ ಚಿತ್ರೀಕರಣ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೋಟೆಯ ರೀತಿಯ ಒಂದು ಕಟ್ಟಡದ ಮೇಲ್ಭಾಗದಿಂದ ಯುವತಿ ಕೆಳಭಾಗಕ್ಕೆ ನೇತಾಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಯುವಕ ನ ಕೈಹಿಡಿದ ಯುವತಿ ಕೆಳಭಾಗದಲ್ಲಿ ನೇತಾಡುತ್ತಿರುವುದು ಮತ್ತು ಈ ಎಲ್ಲ ದೃಶ್ಯವನ್ನು ಓರ್ವ ಯುವಕ ಚಿತ್ರೀಕರಿಸುತ್ತಿರುವುದು ಕೂಡ ವಿಡಿಯೋದಲ್ಲಿದೆ. ಕೆಳಭಾಗದಲ್ಲಿ ಕಲ್ಲುಗಳಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಒಟ್ಟು ನಾಲ್ಕು ಮಂದಿ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ