ದುಬೈ ಮಾಲ್ ನಲ್ಲಿ ಜುಲೈ ಒಂದರಿಂದ ಹೊಸ ವ್ಯವಸ್ಥೆ ಜಾರಿಗೆ: ಏನದು ಗೊತ್ತಾ..?

ದುಬೈ ಮಾಲ್ ನಲ್ಲಿ ಜುಲೈ ಒಂದರಿಂದ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಟೋಲ್ ಗೇಟ್ ಆಪರೇಟರ್ ಗಳಾದ ಸಾಲಿಕ್ ಗೆ ಈ ಪಾರ್ಕಿಂಗ್ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಲ್ ನ ಗ್ರಾಂಡ್ ಪಾರ್ಕಿಂಗ್, ಸಿನಿಮಾ ಪಾರ್ಕಿಂಗ್ ಮತ್ತು ಫಾಶನ್ ಪಾರ್ಕಿಂಗ್ ಮುಂತಾದ ಕಡೆ ಸಾಲಿಕ್ ನ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.
ಕೆಲಸದ ದಿನಗಳಲ್ಲಿ ಮೊದಲಿನ ಒಂದು ಗಂಟೆ ಪಾರ್ಕಿಂಗ್ ಉಚಿತವಾಗಿರುತ್ತದೆ. ಆಬಳಿಕ 20 ದುರ್ಹಮ್ ನಿಂದ ಶುಲ್ಕ ಪ್ರಾರಂಭವಾಗುತ್ತದೆ. ವಾರದ ರಜಾ ದಿನಗಳಲ್ಲಿ ಮೊದಲ ಆರು ಗಂಟೆ ಪಾರ್ಕಿಂಗ್ ಉಚಿತವಾಗಿರುತ್ತದೆ. ಆ ಬಳಿಕದ ಪ್ರತಿಯೊಂದು ಗಂಟೆಗೂ ಶುಲ್ಕ ವಿಧಿಸಲಾಗುವುದು. ಇದೇ ವೇಳೆ ಸಾಬೀಲ್ ಫೌಂಟೇನ್ ವ್ಯೂಸ್ ಪಾರ್ಕಿಂಗ್ ಮುಂತಾದಡೆಗಳಲ್ಲಿ ಬದಲಾವಣೆ ಇರುವುದಿಲ್ಲ. ದುಬೈ ಮಾಲ್ನಲ್ಲಿ 13000 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth