ಗೋಮಾಂಸದ ಆರೋಪ ಹೊರಿಸಿ ಮುಸ್ಲಿಂ ಮನೆಗೆ ನುಗ್ಗಿದ ಗೋ ರಕ್ಷಕ ಗೂಂಡಾಗಳು

ಗೋಮಾಂಸ ಇದೆ ಎಂದು ಆರೋಪಿಸಿ ಒಡಿಸ್ಸಾದಲ್ಲಿ ಗೋ ರಕ್ಷಕ ಗೂಂಡಾಗಳು ಮುಸ್ಲಿಂ ಮನೆಗೆ ನುಗ್ಗಿದ್ದಾರೆ. ಮನೆ ಪ್ರವೇಶಿಸಿದ್ದಲ್ಲದೆ ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಎತ್ತಿಕೊಂಡು ಹೋಗಿದ್ದಾರೆ. ಈದ್ ಹಬ್ಬದ ಬಳಿಕ ಈ ಘಟನೆ ನಡೆದಿದೆ.
ಗೋರಕ್ಷಾ ಗೂಂಡಾಗಳು ಬಲವಂತದಿಂದ ಮನೆ ಪ್ರವೇಶಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಜೈ ಶ್ರೀರಾಮ್ ಎಂದು ಕೂಗುತ್ತಾ ಅವರು ಮನೆ ಪ್ರವೇಶಿಸಿದ್ದಾರೆ. ಬಳಿಕ ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಅವರು ಎತ್ತಿಕೊಂಡು ಹೋಗಿದ್ದಾರೆ. ಈದ್ ದಿನದಂದು ಮುಸ್ಲಿಮರು ಬಲಿ ನೀಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ರಂಗಪ್ರವೇಶಿಸುವುದರೊಂದಿಗೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿದೆ. ಬಳಿಕ ನಗರದಲ್ಲಿ ನಿಷೇಧಜ್ಞೆಯನ್ನು ಹೇರಲಾಯಿತು. ಬಾಲಸೂರ್ ಎಂಬಲ್ಲಿಯೂ ಈದ್ ದಿನದಂದು ಘರ್ಷಣೆ ಉಂಟಾಗಿದೆ. ಬಲಿಗಾಗಿ ಗೋವನ್ನು ವಧೆ ಮಾಡಲಾಗಿದೆ ಎಂಬ ಹೆಸರಲ್ಲಿ ಸಂಘ ಪರಿವಾರ ಘರ್ಷಣೆಗೆ ಇಳಿದಿದೆ ಕಲ್ಲೆಸೆತದಲ್ಲಿ 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth