ಮಾವುತನನ್ನು ತುಳಿದು ಭೀಕರವಾಗಿ ಕೊಂದ ಆನೆ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ - Mahanayaka

ಮಾವುತನನ್ನು ತುಳಿದು ಭೀಕರವಾಗಿ ಕೊಂದ ಆನೆ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

balakrishnan neeleswaram
22/06/2024


Provided by

ಇಡುಕ್ಕಿ/ಕೇರಳ:  ಮಾವುತನನ್ನು ಆನೆಯೊಂದು ತುಳಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದ್ದು,  ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಅಕ್ರಮ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆನೆ ಸಫಾರಿ ಕೇಂದ್ರದ ವಿರುದ್ಧ ಕೇರಳ ಅರಣ್ಯ  ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಕೇರಳದ ನೀಲೇಶ್ವರಂನ ಬಾಲಕೃಷ್ಣನ್(62) ಆನೆ ದಾಳಿಗೆ ಬಲಿಯಾದವರಾಗಿದ್ದಾರೆ.  ಕೇರಳದ ಇಡುಕ್ಕಿ ಜಿಲ್ಲೆಯ ಅಡಿಮಲಿ ಬಳಿಯ ಕಲ್ಲ ರ್‌ನಲ್ಲಿರುವ ಖಾಸಗಿ ಸಫಾರಿ ಕೇಂದ್ರವಾದ ಕೇರಳ ಫಾರ್ಮ್‌ನಲ್ಲಿ ಜೂನ್ 20ರ ಸಂಜೆ 6:30 ರ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಆನೆಯು ಮಾವುತನ ಮೇಲೆ ಭೀಕರವಾಗಿ ದಾಳಿ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.

ಮಾವುತ ಬಾಲಕೃಷ್ಣನ್ ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯಲು ಕಾಯುತ್ತಿದ್ದರು. ಆನೆಯನ್ನು ಸರಿಯಾಗಿ ನಿಲ್ಲಿಸಲು ಅವರು ಪ್ರಯತ್ನಿಸುತ್ತಿದ್ದರು. ಈ ವೇಳೆ ಏಕಾಏಕಿ ಸೊಂಡಿಲಿನಿಂದ ಮಾವುತನನ್ನು ಗುದ್ದಿ ನೆಲಕ್ಕೆ ಕೆಡವಿದ ಆನೆ. ಮಾವುತನ ತೊಡೆಗೆ ಕಾಲಿನಿಂದ ಒದ್ದಿದೆ. ನಂತರ ಸೊಂಟ, ಬೆನ್ನಿಗೆ ಬಲವಾಗಿ ಕಾಲಿನಿಂದ ತುಳಿದು ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದರಿಂದಾಗಿ  ಮಾವುತ ಬಾಲಕೃಷ್ಣನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾವುತನ ಭೀಕರ ಸಾವಿನ ದೃಶ್ಯ ಕಂಡು ಜನ ಮರುಗಿದ್ದಾರೆ.

ಮಾವುತನನ್ನು ಬಲಿ ಪಡೆದ ಇದೇ ಆನೆ ಈ ಹಿಂದೆಯೂ  ಮಾವುತರ ಮೇಲೆ ಆಕ್ರಮಣಕಾರಿ ವರ್ತನೆ ತೋರಿತ್ತು ಎನ್ನಲಾಗಿದೆ. ಇಂತಹ  ಆನೆಯನ್ನು  ಆನೆ ಸಫಾರಿ ಕೇಂದ್ರದಲ್ಲಿ ಹೇಗೆ ಬಳಕೆ ಮಾಡಿದರು ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ.

ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್,  ಅಕ್ರಮ ಸಫಾರಿ ಕೇಂದ್ರಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಅಂತಹ ಸಂಸ್ಥೆಗಳ ವಿರುದ್ಧ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತದೆ. ಯಾವುದೇ ಅಕ್ರಮ ಕೇಂದ್ರಗಳು ಪತ್ತೆಯಾದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ