ಮಹಿಳೆ ಮೇಲೆ 15 ಬೀದಿ ನಾಯಿಗಳ ದಾಳಿ: ಹಿಮ್ಮೆಟ್ಟಿಸಿ ಪಾರಾದ ಮಹಿಳೆ

ಹೈದರಾಬಾದ್ ನ ಮಣಿಕೊಂಡದ ಚಿತ್ರಪುರಿ ಬೆಟ್ಟದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ 15 ಬೀದಿ ನಾಯಿಗಳು ದಾಳಿ ಮಾಡಿವೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವೀಡಿಯೊದಲ್ಲಿ ಮಹಿಳೆ ತನ್ನ ಕೈಗಳನ್ನು ಗಾಳಿಯಲ್ಲಿ ತೀವ್ರವಾಗಿ ಅಲ್ಲಾಡಿಸಿ ನಾಯಿಗಳನ್ನು ದೂರವಿರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಇದೇ ವೇಳೆ ಅವಳು ನೆಲಕ್ಕೆ ಬಿದ್ದಳು. ಆದರೆ ತಕ್ಷಣವೇ ತನ್ನ ಕಾಲುಗಳ ಮೇಲೆ ಎದ್ದು ಆಕ್ರಮಣಕಾರಿ ನಾಯಿಗಳನ್ನು ತಡೆಯಲು ಚಪ್ಪಲಿಯನ್ನು ಬಳಸಿದ್ದಾಳೆ. ಈ ಮೂಲಕ ಮಹಿಳೆಯು ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು.
ಈ ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯರು ಕರೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth