ಕೊಟ್ಟಿಗೆಹಾರ: ಅಡ್ಡಾದಿಡ್ಡಿ ವಾಹನ ನಿಲ್ಲಿಸಿದ ಪೊಲೀಸರು ಸಹಿತ ಪ್ರವಾಸಿಗರಿಗೆ ದಂಡ

ಕೊಟ್ಟಿಗೆಹಾರ : ಪ್ರವಾಸಿ ತಾಣವಾದ ಕೊಟ್ಟಿಗೆಹಾರದಲ್ಲಿ ಭಾನುವಾರದಂದು ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ಪ್ರವಾಸಿಗರು ಕೊಟ್ಟಿಗೆಹಾರ ಅಂಗಡಿ ಹೋಟೇಲುಗಳ ಬಳಿ ಅಡ್ಡಾದಿಡ್ಡಿ ನಿಲ್ಲಿಸಿ ಟೀ ಹೀರಲು ಸಾಗಿದ್ದರು.ಇದರಿಂದ ಸಂಚಾರ ದಟ್ಟಣೆ ಸಂಭವಿಸಿತು. ಸಂಚಾರ ನಿಯಂತ್ರಣ ತಡೆಯಲು ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ಕೊಟ್ಟಿಗೆಹಾರಕ್ಕೆ ಗಸ್ತು ಬಂದ ವೇಳೆ ರಸ್ತೆಯಲ್ಲಿ ನಿಂತ ವಾಹನದವರನ್ನು ಕರೆಸಿ ತೆರವು ಗೊಳಿಸಲು ಹೇಳಿ ರೂ.500 ದಂಡ ಹಾಕಿದರು.
ಪೊಲೀಸರಿಗೆ ದಂಡ:
ಇದರ ನಡುವೆ ಶಿವಮೊಗ್ಗ ಪೊಲೀಸರು ಖಾಸಗಿ ವಾಹನದಲ್ಲಿ ಪ್ರವಾಸ ಬಂದು ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿದ್ದರು. ಈ ವೇಳೆ ಸಂಚಾರ ಪಾಲನೆ ಮಾಡದ ಪೊಲೀಸರಿಗೂ ದಂಡ ವಿಧಿಸಲಾಯಿತು. ದಂಡ ವಿಧಿಸಿದ ಬಳಿಕವೇ ಇವರು ಶಿವಮೊಗ್ಗ ಪೊಲೀಸರು ಎಂದು ತಿಳಿದು ಬಂದಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97