ಹಜ್ ಯಾತ್ರೆ ವೇಳೆ 1301 ಮಂದಿ ಸಾವು: ಸೌದಿ ಆರೋಗ್ಯ ಸಚಿವಾಲಯ ಮಾಹಿತಿ - Mahanayaka

ಹಜ್ ಯಾತ್ರೆ ವೇಳೆ 1301 ಮಂದಿ ಸಾವು: ಸೌದಿ ಆರೋಗ್ಯ ಸಚಿವಾಲಯ ಮಾಹಿತಿ

24/06/2024


Provided by

ಈ ಬಾರಿಯ ಹಜ್ ನಿರ್ವಹಣೆಯ ವೇಳೆ ಒಟ್ಟು 1301 ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇವರಲ್ಲಿ ಹೆಚ್ಚಿನವರು ಅನಧಿಕೃತವಾಗಿ ಹಜ್ ನಿರ್ವಹಿಸಲು ಬಂದವರಾಗಿದ್ದಾರೆ ಎಂದು ಕೂಡ ಸಚಿವಾಲಯ ತಿಳಿಸಿದೆ. ಮೃತಪಟ್ಟವರಲ್ಲಿ 83% ಮಂದಿ ಕೂಡ ಅನುಮತಿ ಇಲ್ಲದೆ ಹಜ್ ನಿರ್ವಹಣೆಗೆ ಬಂದವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಹೀಗೆ ಅನಧಿಕೃತವಾಗಿ ಹಜ್ ನಿರ್ವಹಣೆಗೆ ಬಂದವರಿಗೆ ತಂಗಲು ಸೂಕ್ತ ವ್ಯವಸ್ಥೆಯಾಗಲಿ ವಾಹನ ಸೌಲಭ್ಯಗಳಾಗಲಿ ಇರಲಿಲ್ಲ. ಇವರು ಕಟು ತಾಪಮಾನವನ್ನು ಎದುರಿಸಬೇಕಾಯಿತು. ವಾಹನ ಸೌಲಭ್ಯ ಇಲ್ಲದ ಕಾರಣ ಅವರು ದೀರ್ಘ ದೂರ ನಡೆದುದರಿಂದ ಬಳಲಿಕೆ ಉಂಟಾಗಿದೆ. ಈ ನೆಲೆಯಲ್ಲಿ ಅವರು ದೈಹಿಕವಾಗಿ ಬಳಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಹೀಗೆ ಮೃತ ಪಟ್ಟವರಲ್ಲಿ ಹೆಚ್ಚಿನವರು ವೃದ್ಧರು ಮತ್ತು ಶಾಶ್ವತ ರೋಗಿಗಳೇ ಹೆಚ್ಚಿದ್ದಾರೆ ಎಂದು ಸೌದಿ ಆರೋಗ್ಯ ಸಚಿವ ಫಹದ್ ಅಲ್ ಜಲಾಜೀಲ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ