ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಹುಡುಗಿಯ ಎದುರೇ ಅಸಹ್ಯ ವರ್ತನೆ ತೋರಿದ ಕಾಮುಕ! | ವಿಡಿಯೋ ಸೆರೆ - Mahanayaka

ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಹುಡುಗಿಯ ಎದುರೇ ಅಸಹ್ಯ ವರ್ತನೆ ತೋರಿದ ಕಾಮುಕ! | ವಿಡಿಯೋ ಸೆರೆ

video viral
25/06/2024


Provided by

ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಹುಡುಗಿಯ ಎದುರೇ ವಿಕೃತ ಕಾಮಿಯೊಬ್ಬ ಹಸ್ತಮೈಥುನ ಮಾಡಿರುವ ಅಸಹ್ಯಕಾರಿ ಘಟನೆ ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯೊಂದರಲ್ಲಿ ನಡೆದಿದೆ.

ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು,  ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ, ದೂರದಲ್ಲಿ ಹುಡುಗಿ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿ ಬೈಕ್ ನಿಲ್ಲಿಸಿದ್ದಾನೆ. ಸಮೀಪದಲ್ಲಿ ಯಾವುದೇ ವಾಹನಗಳು, ಸಾರ್ವಜನಿಕರು ಇಲ್ಲ ಎನ್ನುವುದನ್ನು ಗಮನಿಸಿಕೊಂಡು ಹುಡುಗಿಯ ಎದುರೇ  ಹಸ್ತಮೈಥುನ ಮಾಡಿದ್ದಾನೆ.

ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಎದುರೇ ಕಾಮುಕ ತನ್ನ ಕೃತ್ಯ ನಡೆಸಿದ್ದಾನೆ.  ಅಲ್ಲದೇ ಆಕೆಯನ್ನು ಹಿಂಬಾಳಿಸಲು ಕೂಡ ಆತ ಯತ್ನಿಸುತ್ತಾನೆ. ಆದರೆ ಬೇರೆ ವಾಹನಗಳ ಸಂಚಾರ ಇದ್ದ ಕಾರಣ ಹೆದರಿ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆ ಹೆಣ್ಣು ಹೆತ್ತವರನ್ನು ಬೆಚ್ಚಿಬೀಳಿಸಿದೆ. ಹೀಗಾದರೆ ನಮ್ಮ ಹೆಣ್ಣು ಮಕ್ಕಳು ರಸ್ತೆಯಲ್ಲಿ ಧೈರ್ಯವಾಗಿ ನಡೆಯುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.

ಇಂತಹ ಕಾಮುಕರನ್ನು ಬಂಧಿಸಿ ತಕ್ಷಣವೇ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು. ಇಂದು ರಸ್ತೆಯಲ್ಲೇ  ಅಸಭ್ಯವಾಗಿ ವರ್ತಿಸಿದವರು, ನಾಳೆ ಅತ್ಯಾಚಾರ, ಕೊಲೆ ಮಾಡಲೂ ಹೇಸುವುದಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ