ನೀಟ್ ಪ್ರಕರಣ: ಪರೀಕ್ಷೆಯಲ್ಲಿ ಪಾಸ್ ಆಗೋಕೇ 5 ಲಕ್ಷ ಒಪ್ಪಂದ ಮಾಡಿಕೊಂಡಿದ್ದ ಶಿಕ್ಷಕರು

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್ ನಲ್ಲಿ ಬಂಧಿಸಲ್ಪಟ್ಟ ಇಬ್ಬರು ಶಿಕ್ಷಕರು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಗಳೊಂದಿಗೆ 5 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಯಲಾಗಿದೆ.
ಶಿಕ್ಷಕರಾದ ಸಂಜಯ್ ತುಕಾರಾಮ್ ಜಾಧವ್ ಮತ್ತು ಜಲೀಲ್ ಉಮ್ರಖಾನ್ ಪಠಾಣ್ ಅವರನ್ನು ಶನಿವಾರ ರಾತ್ರಿ ಲಾತೂರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ನೀಟ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಾತೂರ್ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ಜಾಧವ್ ಸೋಲಾಪುರದ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ರೆ ಪಠಾಣ್ ಕತ್ಪುರ್ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದ ನಂತರ ಗ್ಯಾಂಗ್ ನ ಕಾರ್ಯವಿಧಾನ ಬೆಳಕಿಗೆ ಬಂದಿದೆ.
ಇವರಿಬ್ಬರು 50,000 ರೂ.ಗಳನ್ನು ಮುಂಗಡವಾಗಿ ತೆಗೆದುಕೊಳ್ಳುತ್ತಿದ್ದರು ಮತ್ತು ಉಳಿದ ಮೊತ್ತವನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಯು ನೀಡಬೇಕಾಗಿತ್ತು.
ಅಭ್ಯರ್ಥಿಗಳು ಮುಂಗಡ ಹಣವನ್ನು ಕಳುಹಿಸಿದ ನಂತರ ಅವರ ಪ್ರವೇಶ ಪತ್ರಗಳನ್ನು ಧಾರಾಶಿವ್ ಜಿಲ್ಲೆಯ ಐಟಿಐ ತರಬೇತುದಾರ ಈರಣ್ಣ ಮಶ್ನಾಜಿ ಕೊಂಗಲ್ವಾರ್ ಎಂಬ ವ್ಯಕ್ತಿಗೆ ಹಸ್ತಾಂತರಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth