ಮಂಗಳೂರು: ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರು

ಮಂಗಳೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಇಬ್ಬರು ಆಟೋ ಚಾಲಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ಮಂಗಳೂರು ನಗರದ ರೊಸಾರಿಯೋ ಶಾಲೆಯ ಬಳಿ ನಡೆದಿದೆ.
ರಾಜು ಮತ್ತು ದೇವರಾಜು ಮೃತಪಟ್ಟ ಆಟೋ ಚಾಲಕರಾಗಿದ್ದಾರೆ. ಒಬ್ಬರು ಪುತ್ತೂರು ನಿವಾಸಿಯಾಗಿದ್ದರೆ ಮತ್ತೊಬ್ಬರು ಸಕಲೇಶಪುರ ನಿವಾಸಿಯಾಗಿದ್ದರು. ಮಂಗಳೂರು ನಗರದ ಪಾಂಡೇಶ್ವರ ರೊಸಾರಿಯೋ ಚರ್ಚ್ ಹಿಂಬದಿಯ ರೂಂವೊಂದರಲ್ಲಿ ಇವರು ವಾಸವಿದ್ದರು ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ ಒಬ್ಬ ಆಟೋ ಚಾಲಕ ಆಟೋ ತೊಳೆಯುತ್ತಿದ್ದರು. ಈ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಸ್ಪರ್ಶಿಸಿದ್ದಾರೆ. ಈ ವೇಳೆ ಅವರಿಗೆ ಶಾಕ್ ತಗುಲಿತ್ತು. ಇದನ್ನು ಗಮನಿಸಿದ ಮತ್ತೊಬ್ಬ ಆಟೋ ಚಾಲಕ ಗೋಣಿ ಚೀಲ ಹಿಡಿದು ಅವರನ್ನು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಅವರಿಗೂ ವಿದ್ಯುತ್ ತಗುಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬುಧವಾರವಷ್ಟೇ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಮನೆಯ ಗೋಡೆ ಕುಸಿದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97