ಒಂದೇ ನಿಮಿಷದಲ್ಲಿ ಓಮ್ನಿಯ ಡೋರ್ ತೆರೆದು ಹಣ ಕಳವು ಮಾಡಿ ಕಳ್ಳ ಪರಾರಿ!

ಚಿಕ್ಕಮಗಳೂರು : ನಕಲಿ ಕೀ ಬಳಸಿ ವಕೀಲರೊಬ್ಬರ ಓಮಿನಿ ಕಾರಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ನಡೆದಿದೆ.
ಅಡ್ವೋಕೇಟ್ ದೀಕ್ಷಿತ್ ಎಂಬುವವರಿಗೆ ಸೇರಿದ ಓಮಿನಿ ಕಾರಿನಿಂದ ಕಳವು ನಡೆದಿದೆ. ಕಾರಿನಲ್ಲಿದ್ದ ವಕೀಲರ ಬ್ಲೇಜರ್ ಸೇರಿದಂತೆ 42 ಸಾವಿರ ಹಣ, ಮೊಬೈಲ್ ಕದ್ದು ಕಳ್ಳ ಎಸ್ಕೇಪ್ ಆಗಿದ್ದಾನೆ.
ನಕಲಿ ಕೀ ಬಳಸಿ ಓಮಿನಿ ಕಾರ್ ಡೋರ್ ಓಪನ್ ಮಾಡಿದ ಕಳ್ಳ ಮೊಬೈಲ್ ನಲ್ಲಿ ಮಾತನಾಡುತ್ತಾ, ಕಾರಿನ ಡೋರ್ ತೆಗೆದು ಕಳ್ಳತನ ಮಾಡಿದ್ದಾನೆ.
ಅಡ್ವೋಕೇಟ್ ದೀಕ್ಷಿತ್ ತಮ್ಮ ಕಚೇರಿಯ ಮುಂಭಾಗ ಕಾರು ನಿಲ್ಲಿಸಿ ಕಾಫಿಗೆ ಹೋದಾಗ ಈ ಘಟನೆ ನಡೆದಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೇವಲ ಒಂದೇ ನಿಮಿಷದಲ್ಲಿ ಕಳ್ಳತನ ಮಾಡಿ ಕಳ್ಳ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97