ಗೂಗಲ್ ಮ್ಯಾಪ್ ತಂದ ಸಂಕಷ್ಟ: ನದಿಗೆ ಇಳಿದು ಕೊಚ್ಚಿಹೋದ ಕಾರು, ಕಾರಿನಲ್ಲಿದ್ದವರ ಕಥೆ ಏನು?

ತಿರುವನಂತಪುರಂ: ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿದ ಪರಿಣಾಮ ಕಾರು ನದಿಗೆ ಇಳಿದಿದ್ದು, ಕಾರಿನಲ್ಲಿದ್ದ ಇಬ್ಬರು ಸ್ವಲ್ಪದರಲ್ಲಿ ಪಾರಾದ ಘಟನೆ ಕಾಸರಗೋಡು ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಟ್ಟಿಕೋಲ್ ಬಳಿಯ ಪಲ್ಲಂಚಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಕಾಞಂಗಾಡ್ ಮೂಲದ ಅಬ್ದುಲ್ ರಹಸೀದ್ ಮತ್ತು ತಸ್ರೀಫ್ ಅಪಾಯದಿಂದ ಪಾರಾದವರು ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಕಾರಿನಲ್ಲಿದ್ದವರು ದಕ್ಷಿಣ ಕನ್ನಡ ಉಪ್ಪಿನಂಗಡಿಗೆ ತೆರಳುತ್ತಿದ್ದರು. ನದಿಗೆ ಅಡ್ಡಲಾಗಿ ಬ್ರಿಡ್ಜ್ ಒಂದನ್ನು ಕಟ್ಟಲಾಗಿದ್ದು, ಹೀಗಾಗಿ ಬೇರೆ ಮಾರ್ಗದಲ್ಲಿ ಹೋಗುವ ಬಗ್ಗೆ ಇವರಿಬ್ಬರು ಮಾತನಾಡಿಕೊಂಡಿದ್ದು, ಗೂಗಲ್ ನಲ್ಲಿ ಬದಲಿ ಮಾರ್ಗವನ್ನು ಹುಡುಕಿದ್ದಾರೆ. ಗೂಗಲ್ ತೋರಿಸಿದ ಮಾರ್ಗದ ಪ್ರಕಾರ ಇವರು ತೆರಳಿದ್ದು, ಕಾರು ರಸ್ತೆ ಬಿಟ್ಟು ನದಿಗೆ ಇಳಿದಿದೆ.
ನದಿಯಲ್ಲಿ ಕಾರು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಎಚ್ಚೆತ್ತುಕೊಂಡ ಕಾರಿನಲ್ಲಿದ್ದವರು ಮರದ ಕೊಂಬೆಯನ್ನು ಹಿಡಿದುಕೊಂಡು ಹೊರ ಬಂದಿದ್ದಾರೆ. ಬಳಿಕ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97