ಗಾಝಾದಲ್ಲಿ ಸೈನಿಕ ಕಾರ್ಯಾಚರಣೆ: ಟೆಂಟ್ ಒಳಗೆ ನಾಯಿ ಬಿಟ್ಟ ಇಸ್ರೇಲ್..!

ಗಾಝಾದ ಜಬಲಿಯ ನಿರಾಶ್ರಿತ ಶಿಬಿರದಲ್ಲಿ ನಡೆಸಿದ ಸೈನಿಕ ಕಾರ್ಯಾಚರಣೆಯ ವೇಳೆ ನಿರಾಶ್ರಿತರು ವಾಸಿಸುವ ಟೆಂಟ್ ನ ಒಳಗೆ ಇಸ್ರೇಲ್ ಸೇನೆ ನಾಯಿಯನ್ನು ಕಳುಹಿಸಿದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಟೆಂಟ್ ಬಿಟ್ಟು ಹೊರ ಹೋಗಿ ಎಂದು ಇಸ್ರೇಲ್ ಸೇನೆ ಆದೇಶಿಸಿತ್ತು. ಆದರೆ ನಿರಾಶ್ರಿತರು ಟೆಂಟ್ ನಲ್ಲೇ ಉಳಿದುಕೊಂಡದ್ದಕ್ಕೆ ಸೇನೆ ಈ ಕ್ರೌರ್ಯವನ್ನು ಎಸೆಗಿದೆ ಎಂದು ತಿಳಿದುಬಂದಿದೆ. ಟೆಂಟ್ ನ ಒಳಗೆ ಮಲಗಿಕೊಂಡಿದ್ದ ವೃದ್ದೆಯ ಮೇಲೆ ನಾಯಿ ಆಕ್ರಮಣ ಎಸಗುವ ದೃಶ್ಯವನ್ನು ಅಲ್ ಜಝಿರಾ ಚಾನೆಲ್ ಬಿಡುಗಡೆಗೊಳಿಸಿದೆ.
ದೌಲತ್ ಅಬ್ದುಲ್ಲ ಅಲ್ ತಾನಾನಿ ಎಂಬ ವೃದ್ದೆಯ ಮೇಲೆ ನಾಯಿ ಆಕ್ರಮಣ ನಡೆಸಿದೆ. ಟೆಂಟ್ ಬಿಟ್ಟು ತೆರಳುವಂತೆ ಸೇನೆ ಆಗ್ರಹಿಸಿದರೂ ತಾನು ಅದನ್ನು ಪಾಲಿಸಲಿಲ್ಲ. ಅದರಿಂದಾಗಿ ಇಸ್ರೇಲ್ ಸೇನೆ ನನ್ನ ವಿರುದ್ಧ ನಾಯಿಯನ್ನು ಛೂ ಬಿಟ್ಟಿತು. ಮಲಗಲು ಸಿದ್ಧವಾಗುತ್ತಿರುವಾಗ ಆ ನಾಯಿ ಟೆಂಟ್ ನೊಳಗೆ ಬಂತು. ನನ್ನನ್ನು ಕಚ್ಚಿ ಟೆಂಟ್ ನಿಂದ ಹೊರಗೆ ಎಳೆದುಕೊಂಡು ಹೋಯಿತು ಎಂದು ಅವರು ಹೇಳಿದ್ದಾರೆ. ನಾಯಿ ಆಕ್ರಮಣದಿಂದಾಗಿ ದೌಲತ್ ಅವರ ಕೈಗೆ ಗಾಯವಾಗಿದೆ. ಆದರೆ ಚಿಕಿತ್ಸೆಗೆ ಯಾವುದೇ ದಾರಿ ಇಲ್ಲ. ಯಾಕೆಂದರೆ ಆಸ್ಪತ್ರೆಗಳಿಗೆ ಈಗಾಗಲೇ ಬೀಗ ಜಡಿಯಲಾಗಿದೆ. ಜಬಲಿಯಾದ ಪರಿಸ್ಥಿತಿ ಭಯಾನಕವಾಗಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth