ದುಬಾರಿ: ಜಿಯೋ ಬೆನ್ನಲ್ಲೇ ಏರ್ ಟೆಲ್‌ನಿಂದ ರೀಚಾರ್ಜ್ ದರ ಏರಿಕೆ

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ವಿವಿಧ ಪ್ಲಾನ್ ಗಳಿಗೆ ದರ ಏರಿಸಿರುವ ಬೆನ್ನಿಗೆ ಇದೀಗ ಭಾರತಿ ಏರ್ ಟೆಲ್ ಕೂಡ ರೀಚಾರ್ಜ್ ದರವನ್ನು ಹೆಚ್ಚಿಸಿದೆ. ರಿಲಯನ್ಸ್ ಜಿಯೋದ ದರ ಶೇಕಡ 12 ರಿಂದ 27ರವರೆಗೆ ಏರಿಕೆ ಆದರೆ ಏರ್ಟೆಲ್ ಶೇಕಡ 10 ರಿಂದ 21 ರಷ್ಟು ಹೆಚ್ಚಿಸಿದೆ.
ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್ ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ
ಅನ್ಲಿಮಿಟೆಡ್ ವಾಯ್ಸ್ ಪ್ಲ್ಯಾನ್ ಮತ್ತು ಡಾಟಾ ಪ್ಲಾನ್ ಗಳಲ್ಲಿ ಏರಿಕೆಯಾಗಿದ್ದು ಹೆಚ್ಚುವರಿ ಡಾಟಾ ದರ ಕೂಡ ಹೆಚ್ಚಳವಾಗಿದೆ. 179 ರೂಪಾಯಿಯ ಅನ್ಲಿಮಿಟೆಡ್ ವಾಯ್ಸ್ ಪ್ಲ್ಯಾನ್ ಈಗ 199 ರೂಪಾಯಿಗೆ ಹೆಚ್ಚಳವಾಗಿದೆ. 28 ದಿನ ವ್ಯಾಲಿಡಿಟಿಯ 1ಜಿಬಿ 265 ರೂಪಾಯಿಯ ಪ್ಲಾನ್ 299 ರೂಪಾಯಿಗೆ ಹೆಚ್ಚಳವಾಗಿದೆ. 84 ದಿನ ವ್ಯಾಲಿಡಿಟಿಯ 1.5 ಜಿಬಿಯ 719 ರೂಪಾಯಿ ಪ್ಲಾನ್ ಈಗ 859 ರೂಪಾಯಿಗೆ ಹೆಚ್ಚಳವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth