ಸಂಸದ ಓವೈಸಿ ಮನೆ ಮೇಲೆ ಶಾಹಿ ಎಸೆದು ಅಪರಿಚಿತ ವ್ಯಕ್ತಿ ಪರಾರಿ

ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ಕಪ್ಪು ಶಾಹಿ ಎಸೆದು ಪರಾರಿಯಾದ ಘಟನೆ ನಡೆದಿದ್ದು ಇದಕ್ಕೆ ಒವೈಸಿ ತೀವ್ರ ತಿರುಗೇಟು ನೀಡಿದ್ದಾರೆ.
ಸಾವರ್ಕರ್ ರೀತಿಯ ಹೇಡಿ ವರ್ತನೆಯನ್ನು ನಿಲ್ಲಿಸಿ ಎಂದವರು ದುಷ್ಕರ್ಮಿಗಳಿಗೆ ಕರೆ ಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣವಚ ಸ್ವೀಕಾರದ ವೇಳೆ ಓವೈಸಿ ಅವರು ಜೈ ಫೆಲೆಸ್ತೀನ್ ಎಂದು ಹೇಳಿದ ಬಳಿಕ ಈ ಘಟನೆ ನಡೆದಿದೆ.
ಓವೈಸಿ ಅವರ ನಿವಾಸಕ್ಕೆ ಕಪ್ಪು ಶಾಹಿ ಎಸೆದ ತಂಡ ಆ ಬಳಿಕ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಂತೆ ಭದ್ರತಾ ಅಧಿಕಾರಿಗಳು ಗಮನಿಸುತ್ತಿದ್ದರು ಎಂದು ಆರೋಪಿಸಿರುವ ಓವೈಸಿ, ಅವರೆಲ್ಲ ಹೇಗೆ ನನ್ನ ನಿವಾಸದ ಸಮೀಪ ಬಂದರೆಂದು ಭದ್ರತಾ ಪೊಲೀಸರನ್ನು ಪ್ರಶ್ನಿಸಿದ್ರೆ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಸದರಿಗೆ ಭದ್ರತೆಯನ್ನು ಖಾತರಿಗೊಳಿಸಿ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth