10ನೇ ತರಗತಿ ಪಾಸ್  ಆದವರಿಗೆ ಕೇಂದ್ರ ಸರಕಾರಿ ಉದ್ಯೋಗಗಳು | ಈಗಲೇ ಅರ್ಜಿ ಸಲ್ಲಿಸಿ - Mahanayaka

10ನೇ ತರಗತಿ ಪಾಸ್  ಆದವರಿಗೆ ಕೇಂದ್ರ ಸರಕಾರಿ ಉದ್ಯೋಗಗಳು | ಈಗಲೇ ಅರ್ಜಿ ಸಲ್ಲಿಸಿ

government jobs
29/06/2024


Provided by

” ಕೇಂದ್ರ ಸರ್ಕಾರವು ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಖಾಲಿ ಇರುವ ಎಂಟಿಎಸ್ ಹುದ್ದೆಗಳಿಗೆ ಹಾಗೂ ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕರೆಯಲಾಗಿದೆ. ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹಾಗೂ ಹವಾಲ್ದಾರ್ ಸೇರಿದಂತೆ ಒಟ್ಟು 8,326 ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿರುತ್ತದೆ. ಅರ್ಜಿ ಸಲ್ಲಿಸ ಬಯಸುವಂತಹ ಅಭ್ಯರ್ಥಿಗಳು ಸಂಪೂರ್ಣ ಅರ್ಹತೆಗಳನ್ನು ತಿಳಿದುಕೊಳ್ಳಿ ನಂತರ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ.

SSC MTS and Havaldar Recruitment 2024 – ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ 8326 ಹುದ್ದೆಗಳ ವಿವರವೂ ಹೀಗಿದೆ.

* ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳು – 4387

* ಹವಾಲ್ದಾರ್ ಹುದ್ದೆಗಳು – 3439

 

 ಅರ್ಜಿ ಸಲ್ಲಿಸಲು ಅರ್ಹತೆ :

ಸ್ಟಾಫ್ ಸೆಲೆಕ್ಷನ್ ಕಮಿಷನ್ ವತಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸುವ ವಯೋಮಿತಿ ನೋಡುವುದಾದರೆ ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ ಹವಾಲ್ದಾರ್ ಹುದ್ದೆಗಳಿಗೆ 27 ವರ್ಷ ಹಾಗೂ ಎಂಟಿಎಸ್ ಹುದ್ದೆಗಳಿಗೆ 25 ವರ್ಷ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರದಲ್ಲಿ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಹಾಗೂ ಫಿಸಿಕಲ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ನೇಮಕಾತಿಯ ಲಿಖಿತಪರೀಕ್ಷೆಯನ್ನು ಅಭ್ಯರ್ಥಿಗಳು ಇಂಗ್ಲೀಷ್ ಭಾಷೆಯನ್ನು ಹೊರತುಪಡಿಸಿ ಕನ್ನಡ ಭಾಷೆಯಲ್ಲಿಯೂ ಕೂಡ ಪರೀಕ್ಷೆ ಬರೆಯಲು ಅವಕಾಶವಿದ್ದು, ರಾಜ್ಯದ್ಯಂತ ಬೆಳಗಾವಿ ಹುಬ್ಬಳ್ಳಿ ಬೆಂಗಳೂರು ಕಲಬುರಗಿ ಮಂಗಳೂರು ಮೈಸೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

Application fee:

*  ಪರಿಶಿಷ್ಟ ಜಾತಿ, ಅಂಗವಿಕಲ,  ಪರಿಶಿಷ್ಟ ಪಂಗಡ ಮಾಜಿ ಸೈನಿಕ ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ.

*  ಉಳಿದ ವರ್ಗದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

 ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಸಿರುವ ಪ್ರಮುಖ ದಿನಾಂಕ :

* ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್ 27, 2024

* ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 31, 2024

 ಅರ್ಜಿ ಸಲ್ಲಿಸುವ ಲಿಂಕ್: https://ssc.gov.in/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ