ಮಗನ ಸಾವನ್ನು ಸಹಿಸಲಾಗದೇ ಸಾವಿಗೆ ಶರಣಾದ ತಾಯಿ! - Mahanayaka
12:17 AM Tuesday 27 - January 2026

ಮಗನ ಸಾವನ್ನು ಸಹಿಸಲಾಗದೇ ಸಾವಿಗೆ ಶರಣಾದ ತಾಯಿ!

bagyam
02/07/2024

ಮೈಸೂರು: ಪುತ್ರನ ಬರ್ಬರ ಹತ್ಯೆಯಿಂದ ಮನನೊಂದ ತಾಯಿಯೊಬ್ಬರು ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನ ಕೂರ್ಗಳ್ಳಿಯಲ್ಲಿ ನಡೆದಿದೆ.

ಭಾಗ್ಯಮ್ಮ (46) ಸಾವಿಗೆ ಶರಣಾದವರಾಗಿದ್ದಾರೆ. ನಿನ್ನೆ ಮನೆಯಲ್ಲೇ ಭಾಗ್ಯಮ್ಮ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಮಗನ ಬರ್ಬರ ಹತ್ಯೆಯ ನಂತರ ತೀವ್ರ ದುಃಖದಲ್ಲಿದ್ದ ಅವರು ಸಾವಿನ ಹಾದಿ ತುಳಿದಿದ್ದಾರೆ.

ಜೂನ್ 9 ರಂದು ಭಾಗ್ಯಮ್ಮ ಪುತ್ರ ಅಭಿಷೇಕ್ ಅಳಿಯನಿಂದಲೇ ಕೊಲೆಯಾಗಿದ್ದನು. ಅಳಿಯ ರವಿಚಂದ್ರನ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನು. ತಂಗಿಗೆ ಹಲ್ಲೆ ಹಿನ್ನಲೆ ಜಗಳ ಬಿಡಿಸಲು ಅಭಿಷೇಕ್ ಹೋಗಿದ್ದನು. ಈ ವೇಳೆ ಬಾವ ರವಿಚಂದ್ರನ್ ಅಳಿಯನಿಗೆ ಚಾಕು ಇರಿದು ಹತ್ಯೆ ಮಾಡಿದ್ದ.

ಮಗನ ಸಾವಿನ ನಂತರ ಭಾಗ್ಯಮ್ಮ ಖಿನ್ನತೆಗೆ ಜಾರಿದ್ದರು. ಮಗನ ಸಾವಿನ ನೋವಿನಲ್ಲೇ ಇದ್ದ ಅವರು ನಿನ್ನೆ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ