ಇವಿಎಂ ಮೇಲೆ ಯಾವುದೇ ವಿಶ್ವಾಸ ನನಗಿಲ್ಲ: ಅಖಿಲೇಶ್ ಯಾದವ್ ಹೇಳಿಕೆ - Mahanayaka
7:53 AM Wednesday 20 - August 2025

ಇವಿಎಂ ಮೇಲೆ ಯಾವುದೇ ವಿಶ್ವಾಸ ನನಗಿಲ್ಲ: ಅಖಿಲೇಶ್ ಯಾದವ್ ಹೇಳಿಕೆ

02/07/2024


Provided by

ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷವು 80 ಸ್ಥಾನ ಗೆದ್ದರೂ ನನಗೆ ಇವಿಎಂ ಮೇಲೆ ಯಾವುದೇ ವಿಶ್ವಾಸ ಮೂಡುವುದಿಲ್ಲ. ಇವಿಎಂ ಮೂಲಕವೇ ಗೆದ್ದು, ಇವಿಎಂ ತೆಗೆದು ಹಾಕುತ್ತೇವೆ ಎಂದು ನಾನು ಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದೆ. ಇವಿಎಂ ವಿಷಯ ಇಲ್ಲವಾಗಿಲ್ಲ. ಇವಿಎಂ ಅನ್ನು ತೆಗೆದು ಹಾಕುವವರೆಗೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ಬೇಡಿಕೆಗೆ ಅಂಟಿಕೊಂಡಿರುತ್ತಾರೆ” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಇಂದು ಲೋಕಸಭಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು ಪ್ರಶ್ನೆಗಳಿವೆ ಎಂದು ಗಂಭೀರ ಆರೋಪ ಮಾಡಿದರು. ನನಗೆ ಇವಿಎಂಗಳ ಬಗ್ಗೆ ವಿಶ್ವಾಸವಿಲ್ಲ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.

ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ವಾರಣಾಸಿಯ ಅಭಿವೃದ್ಧಿ, ಉತ್ತರ ಪ್ರದೇಶದಲ್ಲಿನ ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅವರು ಪ್ರಸ್ತಾಪಿಸಿದರು. ವಾಸ್ತವವೆಂದರೆ, ಯುವಕರಿಗೆ ಉದ್ಯೋಗ ನೀಡಕೂಡದೆಂದು ಸರಕಾರವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದೆ ಎಂದೂ ಅವರು ಆಪಾದಿಸಿದರು.
ಸಮಾಜವಾದಿ ಪಕ್ಷವು ಜಾತಿ ಜನಗಣತಿಯ ಪರವಾಗಿದೆ ಹಾಗೂ ಅಗ್ನಿವೀರ್ ಯೋಜನೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ