ಮದುವೆಯಾಗುವುದಿಲ್ಲ ಎಂದ ಪ್ರಿಯಕರನಿಗೆ ಘೋರ ಶಿಕ್ಷೆ ನೀಡಿದ ವೈದ್ಯೆ! - Mahanayaka

ಮದುವೆಯಾಗುವುದಿಲ್ಲ ಎಂದ ಪ್ರಿಯಕರನಿಗೆ ಘೋರ ಶಿಕ್ಷೆ ನೀಡಿದ ವೈದ್ಯೆ!

bihar
03/07/2024


Provided by

ಪಾಟ್ನಾ: ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಖಾಸಗಿ ಅಂಗವನ್ನೇ ಯುವತಿ ಕತ್ತರಿಸಿರುವ  ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ವೈದ್ಯೆ ಅಭಿಲಾಷಾ 30 ವರ್ಷ ವಯಸ್ಸಿನ ತನ್ನ ಬಾಯ್ ಫ್ರೆಂಡ್ ಜೊತೆಗೆ ಕಳೆದೆರಡು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಜು.1ರಂದು ಚಪ್ರಾ ಕೋರ್ಟ್ ನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿದ್ದರು.

ಆದರೆ ಗೆಳೆಯ ಮದುವೆಯಾಗಲು ಬಾರದೇ ಮೋಸ ಮಾಡಿದ್ದ.  ಹೀಗಾಗಿ ಬಾಯ್ ಫ್ರೆಂಡ್  ನ್ನು ಮದುವೆ ಬಗ್ಗೆ ಮಾತನಾಡಲು ನರ್ಸಿಂಗ್ ಹೋಮ್ ಗೆ ಕರೆದ ಅಭಿಲಾಷಾ ಅನಸ್ತೇಷಿಯಾ ನೀಡಿ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ.

ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದಿದ್ದೆ ಅಲ್ವಾ? ನೀನ್ಯಾಕೆ ನನ್ನನ್ನು ಮದುವೆ ಆಗಿಲ್ಲ ಎಂದು ಅಭಿಲಾಷಾ ತನ್ನ ಬಾಯ್ ಫ್ರೆಂಡ್ ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನೀನು ನನ್ನ ಮರ್ಯಾದೆ ತೆಗೆದಿದ್ದೀಯಾ, ಇಟ್ಟುಕೊಂಡವರನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದ್ರೆ ನೀನು ಅದಕ್ಕಿಂತಲೂ ಕೀಳಾಗಿ ನನ್ನನ್ನು ನೋಡಿದ್ದಿ ಎಂದು ಅಭಿಲಾಷಾ ತನ್ನ ಕೃತ್ಯದ ನಂತರ ಬಾಯ್ ಫ್ರೆಂಡ್ ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಸದ್ಯ ಕೃತ್ಯಕ್ಕೆ ಬಳಸಿದ ಚಾಕು ಸಹಿತ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ವೈದ್ಯೆ ತನ್ನ ಪ್ರಿಯಕರನಿಗೆ ಈ ಶಿಕ್ಷೆ ನೀಡಿದ್ದಾಳೆ ಎಂದು ಹೇಳಲಾಗಿದ್ದು, ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ