ಡೆಂಗ್ಯೂ ಸಂಕಷ್ಟ: 2 ವಿಧದ ಪರೀಕ್ಷೆಗೆ ಒಟ್ಟು 600 ರೂ. ಶುಲ್ಕ! - Mahanayaka

ಡೆಂಗ್ಯೂ ಸಂಕಷ್ಟ: 2 ವಿಧದ ಪರೀಕ್ಷೆಗೆ ಒಟ್ಟು 600 ರೂ. ಶುಲ್ಕ!

dengu
04/07/2024


Provided by

ಬೆಂಗಳೂರು: ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳ ಹೆಚ್ಚಳದ ಮಧ್ಯೆ, ಕರ್ನಾಟಕ ಸರ್ಕಾರವು ಖಾಸಗಿ ಆಸ್ಪತ್ರೆಗಳು ಮತ್ತು ರೋಗನಿರ್ಣಯ ಪ್ರಯೋಗಾಲಯಗಳಲ್ಲಿ ಡೆಂಗ್ಯೂ ಪರೀಕ್ಷೆಗಳಿಗೆ ವಿಧಿಸುವ ದರಕ್ಕೆ ಮಿತಿ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಬುಧವಾರ ಈ ಕುರಿತ ಆದೇಶ ಹೊರಡಿಸಿದ್ದು, ಎರಡು ವಿಧದ ಪರೀಕ್ಷೆಗೆ ಒಟ್ಟು 600 ರೂಪಾಯಿ ವಿಧಿಸಬಹುದು ಎಂದು ಸೂಚಿಸಿದೆ.

ಎನ್‌ ಎಸ್‌ ಐ ಪ್ರತಿಜನಕ ಪರೀಕ್ಷೆ (NS1 antigen test) ಮತ್ತು ಐಜಿಎಂ ಪರೀಕ್ಷೆ (IgM testing) ಗೆ ತಲಾ 300 ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಇದರಂತೆ, ಎರಡು ರೀತಿಯ ಪರೀಕ್ಷೆಗಳಿಗೆ ಒಟ್ಟು 600 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡೆಂಗ್ಯೂ ಸಂಬಂಧಿತ ಪರೀಕ್ಷೆಗಳಿಗೆ ಮನಸಿಗೆ ತೋಚಿದ ದರ ವಸೂಲಿ ಮಾಡುತ್ತಿರುವುದನ್ನು ತಡೆಯಲು ಉದ್ದೇಶಪೂರ್ವಕವಾಗಿ ಮತ್ತು ಬೆಲೆಯ ಮಿತಿಯನ್ನು ನಿಗದಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಇದಾಗಿ ಮಾರನೇ ದಿನವೇ ಅಧಿಕಾರಿಗಳು ನೀಡಿದ ಶಿಫಾರಸಿನ ಪ್ರಕಾರ ಈ ದರವನ್ನು ಸರ್ಕಾರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಈ ಪರೀಕ್ಷೆಗಳಿಗೆ 600 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುವಂತೆ ಇಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ