KSRTC ಬಸ್ ದರ ಶೇ.15ರಿಂದ 20ರಷ್ಟು  ಏರಿಕೆಗೆ ಚಿಂತನೆ: ಕಾರಣ ಏನು? - Mahanayaka

KSRTC ಬಸ್ ದರ ಶೇ.15ರಿಂದ 20ರಷ್ಟು  ಏರಿಕೆಗೆ ಚಿಂತನೆ: ಕಾರಣ ಏನು?

ksrtc
14/07/2024


Provided by

ಬೆಂಗಳೂರು: ಸದ್ಯದಲ್ಲೇ  ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು ಎಂದು ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

ಅವರು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,  ಮೊನ್ನೆ ತಾನೇ ಬೋರ್ಡ್ ಮೀಟಿಂಗ್ ಮುಗಿದಿದ್ದು 15–20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ತೈಲ ಬೆಲೆ ಏರಿಕೆ, ಹೊಸ ಬಸ್‌ ಗಳ ಖರೀದಿಯಿಂದ ಸಂಸ್ಥೆಗೆ ಹೊರೆಯಾಗಿದೆ. ಅಲ್ಲದೇ ಈ ಬಾರಿ ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಮಾಡಲಿದ್ದೇವೆ. ಈ ಎಲ್ಲಾ  ಕಾರಣಗಳಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಎಸ್.ಆರ್.ಶ್ರೀನಿವಾಸ್ ಸಮರ್ಥನೆ ಕೊಟ್ಟಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ನಿಗಮಕ್ಕೆ ಬರೊಬ್ಬರಿ 295 ಕೋಟಿ ರೂ ನಷ್ಟವಾಗಿದೆ. ಇವೆಲ್ಲಾ ಸರಿದೂಗಿಸಲು ಹಾಗೂ ಸಂಸ್ಥೆಯನ್ನು ಉಳಿಸಬೇಕಾದರೆ ಟಿಕೆಟ್ ದರ ಹೆಚ್ಚಿಗೆ ಮಾಡಲೇಬೇಕು ಎಂದು ಸಮಜಾಯಿಷಿ ಕೊಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ