ರೈಲ್ವೆ ಟ್ರ್ಯಾಕ್ ನಲ್ಲಿ ಫೋಟೋಶೂಟ್ ನಡೆಯುತ್ತಿದ್ದ ವೇಳೆ ಅವಘಡ: ಸ್ಪಲ್ಪದರಲ್ಲೇ ಪಾರಾದ ಜೋಡಿ - Mahanayaka
12:40 AM Saturday 25 - October 2025

ರೈಲ್ವೆ ಟ್ರ್ಯಾಕ್ ನಲ್ಲಿ ಫೋಟೋಶೂಟ್ ನಡೆಯುತ್ತಿದ್ದ ವೇಳೆ ಅವಘಡ: ಸ್ಪಲ್ಪದರಲ್ಲೇ ಪಾರಾದ ಜೋಡಿ

15/07/2024

ರೈಲ್ವೆ ಟ್ರ್ಯಾಕ್ ನಲ್ಲಿ ಫೋಟೋಶೂಟ್ ಮಾಡುತ್ತಿದ್ದ ನವ ದಂಪತಿಗಳು ರೈಲನ್ನು ಕಂಡು ಕೆಳಗೆ ಹಾರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ಪಾಲಿ ಎಂಬಲ್ಲಿಯ ಗೋರಂ ಘಾಟ್ ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಸೇತುವೆಯಲ್ಲಿ ಫೋಟೋಶೂಟ್ ನಡೆಸುತ್ತಿರುವಾಗಲೇ ಎದುರಿನಿಂದ ಟ್ರೈನ್ ಬಂದುದನ್ನು ಕಂಡು ನವ ವಧು ಮತ್ತು ವರ 90 ಮೀಟರ್ ಎತ್ತರದಿಂದ ಕೆಳಗಡೆಗೆ ಹಾರಿದ್ದಾರೆ. ಇದರಿಂದಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

22 ವರ್ಷದ ರಾಹುಲ್ ಮೆವಾಡ್ ಮತ್ತು 20 ವರ್ಷದ ಜಾನ್ವಿ ಹೀಗೆ ಸೇತುವೆಯಿಂದ ಜಿಗಿದ ವಧು ಮತ್ತು ವರರಾಗಿದ್ದು ಹತ್ತಿರ ಟ್ರೈನ್ ಬರುವವರೆಗೆ ಅವರಿಗೆ ಗೊತ್ತಾಗಿರಲಿಲ್ಲ. ಟ್ರೈನ್ ಕಂಡೊಡನೆ ತಕ್ಷಣ ಅವರು ಸೇತುವೆಯಿಂದ ಹಾರುವುದು ವಿಡಿಯೋದಲ್ಲಿದೆ. ಆದರೆ ಟ್ರೈನ್ ನಿಧಾನಗತಿಯಲ್ಲಿ ಬರುತ್ತಿತ್ತು. ಇಬ್ಬರನ್ನೂ ನೋಡಿದ ಲೋಕೊ ಪೈಲೆಟ್ ಟ್ರೈನ್ ಅನ್ನು ನಿಲ್ಲಿಸಿದ್ದಾರೆ. ಜೊತೆಗಿದ್ದ ಬಂಧುಗಳು ಇವರ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು. ಗಾಯಗೊಂಡ ವಧು ಮತ್ತು ವರರನ್ನು ರೈಲ್ವೆ ಗಾರ್ಡ್ ಗಳ ನೆರವಿನೊಂದಿಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರಲ್ಲಿ ವರನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ