ಕೊಪ್ಪ ತಾಲೂಕಿನಾದ್ಯಂತ ಮಳೆಯೋ ಮಳೆ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಾದ್ಯಂತ ಮಳೆಯೋ ಮಳೆ, ಭಾರೀ ಮಳೆಯಿಂದ ಮಲೆನಾಡ ತಾಲೂಕುಗಳು ಹೈರಾಣಾಗಿವೆ.
ಹೊರನಾಡು–ಶೃಂಗೇರಿ ಮುಖ್ಯ ರಸ್ತೆ ಸಂಪರ್ಕ ಕಟ್ ಆಗಿದೆ. ಧರೆ ಕುಸಿತದಿಂದ ರಸ್ತೆ ಮೇಲೆ ಬೃಹತ್ ಮಣ್ಣಿನ ರಾಶಿ ಬಿದ್ದಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರಗಳನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.
ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪದ ರಸ್ತೆಯಲ್ಲಿ ಧರೆಕುಸಿತವಾಗಿದೆ. ಬಿಳಾಲುಕೊಪ್ಪ ರಸ್ತೆಯಲ್ಲಿ ನೀರೋ…ನೀರು… ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಯಾವುದು ಅಂತಾನೇ ತಿಳಿಯದಂತೆ ನೀರು ಹರಿಯುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆ ಮೇಲೆಯೇ ನೀರು ಹರಿಯುತ್ತಿದೆ.
ಸೋಮೇಶ್ವರ ಖಾನ್ ಎಸ್ಟೇಟ್–ಬಸರಿಕಟ್ಟೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕೊಪ್ಪ ತಾಲೂಕಿನಾದ್ಯಂತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97