ಮಾಹಾರಾಜವಾಡಿಯಲ್ಲಿ ಸಂಭ್ರಮದ ಮೋಹರಂ ಹಬ್ಬ ಆಚರಣೆ

ಔರಾದ : ಹಿಂದೂ –- ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ತಾಲೂಕಿನ ಮಾಹಾರಾಜವಾಡಿ ಗ್ರಾಮಸ್ಥರು ಅದ್ಧೂರಿಯಾಗಿ ಆಚರಿಸಿದರು.
ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾರಾಜವಾಡಿ ಗ್ರಾಮದಲ್ಲಿ ಸರ್ವ ಸಮುದಾಯಗಳು ಶತ ಶತ ಮಾನಗಳ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಹಲವು ವರ್ಷಗಳಿಂದಲೂ ನಡೆದುಕೊಂಡ ಬಂದ ಸಂಪ್ರದಾಯದಂತೆ ಅಲಾವಿ ಕುಣಿತ , ಮಜುನು ಕುಣಿತ , ಪೈತ್ರಿ ಪದ , ಹಾಡುತ ಕುಣಿಯುತ ಗ್ರಾಮದ ಜನರು ಶ್ರದ್ಧಾ ಭಕ್ತಿಯಿಂದ ತಮ್ಮ ಇಷ್ಠಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿಕೊಂಡರು. ಹೂವಿನ ಹಾರ, ತೆಂಗಿನ ಕಾಯಿ , ಊದುಬತ್ತಿ, ಸಕ್ಕರೆ ಬೆಲ್, ಪಾನಕ ನೈವೇದ್ಯ ಪಿರ್ ದೆವರಿಗೆ ಆರ್ಪಿಸಿದರು.
ಈ ಮೋಹರಂ ಉತ್ಸವ ಹಿಂದು ಹಾಗೂ ಮುಸ್ಲಿಂ ಬಾಂಧವರಲ್ಲಿ ಭಕ್ತಿಭಾವ ಮುಡಿಸಿತು. ಲಾಲಸಾಬ್ ಹಾಗೂ ಲಾಲೆಹೈದರ ಪಿರ್ ದೇವರ ಪಂಜಾ ಮೇರವಣಿಗೆ ಸೋಮುವಾರ ನಸುಕಿನಜಾವ ಅದ್ಧೂರಿಯಾಗಿ ಜರುಗಿತು. ಪಂಜಾ ಮೆರವಣಿಗೆ ನಡೆಸಿ ಮೂಲಸ್ದಾನಕ್ಕೆ ತಂದು ಪ್ರತಿಷ್ಠಾಪಿಸಿ ಪೂಜಿಸಿ ನೈವೇದ್ಯ ಸಮರ್ಪಿಸಿದರು.
ವರದಿ: ರವಿಕುಮಾರ ಸಿಂಧೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97