ಭದ್ರಾ ನದಿಯಲ್ಲಿ ಸಿಲುಕಿದ್ದ 30ಕ್ಕೂ ಅಧಿಕ ದನಗಳ ರಕ್ಷಣೆ! - Mahanayaka

ಭದ್ರಾ ನದಿಯಲ್ಲಿ ಸಿಲುಕಿದ್ದ 30ಕ್ಕೂ ಅಧಿಕ ದನಗಳ ರಕ್ಷಣೆ!

chikkamagaluru
24/07/2024


Provided by

ಚಿಕ್ಕಮಗಳೂರು:  ಭದ್ರಾ ನದಿಯಲ್ಲಿ ಸಿಲುಕಿದ್ದ ಸುಮಾರು 30ಕ್ಕೂ ಹೆಚ್ಚು ದನಗಳನ್ನು ಭದ್ರಾ ಹುಲಿ ಸಂರಕ್ಷತಾರಣ್ಯದ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.

ಎನ್.ಆರ್.ಪುರ ತಾಲೂಕಿನ ಹೊನ್ನೆಕೂಡಿಗೆಯ ಸಾಲೂರು ಬಳಿ 30ಕ್ಕೂ ಅಧಿಕ ದನಗಳನ್ನು ರಕ್ಷಣೆ ಮಾಡಲಾಯಿತು. ಸಾಲೂರು ಸಮೀಪ ಇಬ್ಭಾಗವಾಗಿ ಭದ್ರೆ ಹರಿಯುತ್ತದೆ. ಈ ನದಿಯ ಮಧ್ಯ ಭಾಗ ದ್ವೀಪದಂತಾಗಿದೆ. ಈ ಸ್ಥಳಕ್ಕೆ ದನಗಳು ತೆರಳಿ ನದಿ ಮಧ್ಯೆ ಸಿಲುಕಿಕೊಂಡಿತ್ತು.

ದನಗಳ ಮೇವು ಹರಿಸಿಕೊಂಡು ನದಿಯ ಮಧ್ಯ ಭಾಗಕ್ಕೆ  ಹೋಗಿತ್ತು ಈ ವೇಳೆ ಏಕಾಏಕಿ ನದಿಯ ಹರಿವಿನಲ್ಲಿ ಏರಿಕೆಯಾಗಿದೆ. ಹೀಗಾಗಿ ನದಿಯಿಂದ ದಡಕ್ಕೆ ಬರಲಾಗದೇ ದನಗಳು ಸಂಕಷ್ಟದಲ್ಲಿದ್ದವು. ಜೊತೆಗೆ ಈ ಭಾಗಕ್ಕೂ ನೀರು ವ್ಯಾಪಿಸಿದರೆ, ದನಗಳು ನೀರು ಪಾಲಾಗುವ ಸಾಧ್ಯತೆಗಳಿತ್ತು.

ಸದ್ಯ ದ್ವೀಪದಂತಾಗಿದ್ದ ಸ್ಥಳಕ್ಕೆ  ಬೋಟ್ ನಲ್ಲಿ ಹೋಗಿ ದನಗಳನ್ನು ದಡಕ್ಕೆ ತರಲಾಗಿದೆ. ಭದ್ರಾ ಹುಲಿ ಸಂರಕ್ಷತಾರಣ್ಯದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ