ಮುಳುಗಡೆಯಾಗಿದ್ದ ಸೇತುವೆ ಮೇಲೆ ಜೀಪ್ ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲು - Mahanayaka
5:44 AM Wednesday 15 - October 2025

ಮುಳುಗಡೆಯಾಗಿದ್ದ ಸೇತುವೆ ಮೇಲೆ ಜೀಪ್ ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲು

chikkamagaluru
26/07/2024

ಚಿಕ್ಕಮಗಳೂರು: ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದರೂ ಕ್ಯಾರೇ ಮಾಡದೇ ಸೇತುವೆ ಮೇಲೆ ಜೀಪ್ ಚಲಾಯಿಸಿ ಸ್ವಲ್ಪದಲ್ಲೇ ಪಾರಾದ ಘಟನೆಗೆ ಸಂಬಂಧಿಸಿದಂತೆ ಜೀಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Provided by

ಕಳಸ ಪೊಲೀಸರು ಜೀಪ್ ನ್ನು ವಶಕ್ಕೆ ಪಡೆದುಕೊಂಡಿದ್ದು, ಜೀಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿ.ಎನ್.ಎಸ್. 281 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಿದ್ರು ಡೊಂಟ್ ಕೇರ್ ಅಂದಿದ್ದ ಚಾಲಕ‌,  ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ರು ಅದರಲ್ಲೇ ಜೀಪ್ ಚಾಲನೆ ಮಾಡಿದ್ದ.  ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಅಪಾಯಕಾರಿ ಸನ್ನಿವೇಶವಿದ್ದರೂ ಜೀಪ್ ಚಾಲಕ ಹುಚ್ಚಾಟ ಮೆರೆದಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ