ನಿಮ್ಮ ನೆರಳೇ ನಿಮ್ಮ ಅತ್ಯುತ್ತಮ ಸ್ನೇಹಿತ: ಇದ್ದರೆ ಎಂತಹ ಸ್ನೇಹಿತರಿರಬೇಕು? - Mahanayaka

ನಿಮ್ಮ ನೆರಳೇ ನಿಮ್ಮ ಅತ್ಯುತ್ತಮ ಸ್ನೇಹಿತ: ಇದ್ದರೆ ಎಂತಹ ಸ್ನೇಹಿತರಿರಬೇಕು?

best friend
04/08/2024

ಇಂದು ಸ್ನೇಹಿತರ ದಿನ,  ಸ್ನೇಹ ಎನ್ನುವುದು ನಿರಂತರ ಮಾತ್ರವಲ್ಲ, ನಿಸ್ವಾರ್ಥ ಕೂಡ. ಸ್ನೇಹಿತರು ಎನ್ನುವ ಪರಿಕಲ್ಪನೆಯ ವ್ಯಾಪ್ತಿ ಬಹಳ ವಿಸ್ತಾರವಾದದ್ದು.

ಸ್ನೇಹಿತರ ದಿನದಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ. ನಿಮ್ಮ ನೆರಳು ನಿಮ್ಮ ಬೆಸ್ಟ್ ಫ್ರೆಂಡ್ ಎಂದು ಟ್ಯಾಗ್ ಲೈನ್ ನೀಡಿದೆ. ಈ ವಿಡಿಯೋದಲ್ಲಿ ಚಿರತೆ ಮತ್ತು ಕರಿ ಚಿರತೆ ಜೊತೆಯಾಗಿ ನಡೆಯುತ್ತಾ ಸಾಗುತ್ತಿದೆ. ಚಿರತೆಯ ನೆರಳಿನಂತೆ ಕರಿ ಚಿರತೆಯನ್ನು ಬಣ್ಣಿಸಲಾಗಿದೆ.


Provided by

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಟ್ವೀಟ್ ಬಹಳ ಅರ್ಥ ಗರ್ಭಿತವಾಗಿದೆ. ಒಬ್ಬ ಬೆಸ್ಟ್ ಫ್ರೆಂಡ್ ನಮ್ಮ ನೆರಳಿನಂತೆ ಇರುತ್ತಾನೆ. ಸದಾ ನಮಗೆ ಒಳ್ಳಯದ್ದನ್ನೇ ಬಯಸುತ್ತಾನೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಾಡಿರುವ ಟ್ವೀಟ್ “ಕಬಿನಿ ವನ್ಯಜೀವಿ ಪ್ರದೇಶದಲ್ಲಿ ಸಯಾ ಮತ್ತು ಕ್ಲಿಯೊ ಚಿರತೆಗಳ ಒಡನಾಟದ ಕ್ಷಣವಾಗಿದ್ದು, ಶಾಝ್‌ ಜಂಗ್‌ ವಿಡಿಯೋ ಮಾಡಿದ್ದಾರೆ. ಈ ಅದ್ಭುತವೆನಿಸುವ ಅತ್ಯಂತ ಸುಂದರ ಕ್ಷಣದ ವಿಡಿಯೋ 2024ರ ಸ್ನೇಹಿತರ ದಿನದ ‘ನಿಮ್ಮ ನೆರಳೇ ನಿಮ್ಮ ಅತ್ಯುತ್ತಮ ಸ್ನೇಹಿತ’ ಸಂದೇಶಕ್ಕೆ ಬಹಳ ಹೊಂದಿಕೆಯಾಗುತ್ತದೆ” ಎಂಬ ಸಂದೇಶ ಗಮನಸೆಳೆದಿದೆ.

ನಮ್ಮ ಜೊತೆಗಿರುವವರೆಲ್ಲರೂ ನಮ್ಮ ಬೆಸ್ಟ್ ಫ್ರೆಂಡ್ ಆಗಲು ಸಾಧ್ಯವಿಲ್ಲ. ನಮ್ಮ ನೆರಳಿನಂತೆಯೇ ಜೊತೆಗಿರುವವರು ನಿಜವಾದ ಸ್ನೇಹಿತರು. ನೂರು ಜನ ಜೊತೆಗಾರರು ಇದ್ದರೆ ಅದರಲ್ಲಿ ಒಬ್ಬರೋ ಇಬ್ಬರೋ ಉತ್ತಮ ಸ್ನೇಹಿತರಿರುತ್ತಾರೆ.

ಉತ್ತಮ ಹಾದಿಯನ್ನು ಮುನ್ನಡೆಯಲು ಹೇಳಿಕೊಡುವವನೇ ನಿಜವಾದ ಸ್ನೇಹಿತ. ಎಲ್ಲೋ ಬಾರ್ ನಲ್ಲಿ ಕುಡಿಯಲು, ತಿನ್ನಲು, ಸುತ್ತಾಡಲು ಜೊತೆಗೆ ಬರುವವನು ಸ್ನೇಹಿತ ಅಂತ ಹೇಳಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬಾರ್ ಗಳಿಗೆ ಕುಡಿಯಲು ಜೊತೆಗೆ ಹೋಗಿ ವಾಪಸ್ ಬರುವಾಗ ಸ್ನೇಹಿತನನ್ನೇ ಹತ್ಯೆ ಮಾಡುವ, ಹಲ್ಲೆ ನಡೆಸುವಂತಹ ಸಾಕಷ್ಟು ಪ್ರಕರಣಗಳನ್ನು ನಾವು ನೋಡಬಹುದಾಗಿದೆ.

ನಮ್ಮ ಜೊತೆಗೆ ಇದ್ದು ಕೊಂಡು ನಮ್ಮ ಪ್ರತಿ ಯಶಸ್ಸನ್ನು ತಮಾಷೆಯ ಹೆಸರಿನಲ್ಲಿ ವ್ಯಂಗ್ಯವಾಡುತ್ತಾ, ನಮ್ಮ ಬೆಳವಣಿಗೆಯನ್ನು ಸಹಿಸದೇ ಇತರರ ಎದುರು ಅವಮಾನಿಸುವವರು ನಮ್ಮ ಸ್ನೇಹಿತರಾಗಿರಲಾರರು. ಅವರು ನಮ್ಮನ್ನು ಒಳಗಿಂದೊಳಗೆ ದ್ವೇಷಿಸುತ್ತಾ ಇರುತ್ತಾರೆ. ನಮ್ಮ ಬೆಳವಣಿಗೆ ಸಹಿಸುವುದಿಲ್ಲ.

ಸ್ನೇಹಿತನಾದವನು, ತನ್ನ ಸ್ನೇಹಿತನನ್ನು ದುಶ್ಚಟಕ್ಕೆ ಬಲಿಯಾಗದಂತೆ ಕಾಯುವವನು. ಸ್ನೇಹಿತನು ತನ್ನಂತೆಯೇ ಮೇಲೆ ಬರಬೇಕು ಎಂದು ಆಶಿಸುವವನು. ಸಂಕಷ್ಟ ಅಂತ ಬಂದಾಗ, ಯಾವ ರಿಸ್ಕ್ ತೆಗೆದುಕೊಂಡಾದರೂ ನಮ್ಮ ಜೊತೆಗೆ ನಿಲ್ಲುವವನಾಗಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ