ಬಿಜೆಪಿ ಶಾಸಕನ ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರ ಬರ್ಬರ ಹತ್ಯೆ! - Mahanayaka

ಬಿಜೆಪಿ ಶಾಸಕನ ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರ ಬರ್ಬರ ಹತ್ಯೆ!

06/03/2021

ಮಧ್ಯಪ್ರದೇಶ: ಬಿಜೆಪಿ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು  ಸಾವನ್ನಪ್ಪಿರುವ ಘಟನೆ ಬನ್ವಾರ್ ಗ್ರಾಮದಲ್ಲಿ ನಡೆದಿದ್ದು, ಜನ್ಮ ದಿನಾಚರಣೆ ಸಂಭ್ರಮದ ನಡುವೆಯೇ ಈ ದುರ್ಘಟನೆ ನಡೆದಿದೆ.


Provided by

ಮಧ್ಯಪ್ರದೇಶದ ಬಿಜೆಪಿ ಶಾಸಕ ಧರ್ಮೇಂದ್ರ ಲೋಧಿ ಎಂಬವರ ಬರ್ತ್ ಡೇ ಪಾರ್ಟಿಯ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು,  ಈ ವೇಳೆ 30 ವರ್ಷ ವಯಸ್ಸಿನ ಜೋಗೇಂದ್ರ ಸಿಂಗ್ ಮತ್ತು ಅರವಿಂದ್ ಜೈ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.

ಮಾರ್ಚ್ 5ರಂದು ರಾತ್ರಿ ಈ ಘಟನೆ ನಡೆದಿದೆ ಮೃತರ ಪೈಕಿ ಅರವಿಂದ ಪೈ ಎಂಬಾತ ಶಾಸಕರ ಕಡೆಯ ವ್ಯಕ್ತಿ ಎಂದು ಹೇಳಲಾಗಿದೆ. ಜೋಗೇಂದ್ರ ಸಿಂಗ್ ಅತಿಥಿ ಉಪನ್ಯಾಸಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೋಗೇಂದ್ರ ಸಿಂಗ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದರೆ, ಅರವಿಂದ್ ಜೈ ಎಂಬವರನ್ನು ಬಡಿಗೆ ಹಾಗೂ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಘಟನೆಯ ಸಂದರ್ಭದಲ್ಲಿ ಶಾಸಕ ಧರ್ಮೇಂದ್ರ ಲೋಧಿ ಸ್ಥಳದಲ್ಲಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಘಟನೆಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ