ವಿವಾದ ಸೃಷ್ಟಿಸಿದ ವಕ್ಫ್ ತಿದ್ದುಪಡಿ ಕಾಯ್ದೆ: ಕಾಂಗ್ರೆಸ್ ಸಂಸದರಿಂದ ಖಂಡನೆ - Mahanayaka

ವಿವಾದ ಸೃಷ್ಟಿಸಿದ ವಕ್ಫ್ ತಿದ್ದುಪಡಿ ಕಾಯ್ದೆ: ಕಾಂಗ್ರೆಸ್ ಸಂಸದರಿಂದ ಖಂಡನೆ

08/08/2024


Provided by

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಕಟುವಾಗಿ ಖಂಡಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಆಡಳಿತ ಸಮಿತಿಯಲ್ಲಿ ಮತ್ತು ಗುರುವಾಯೂರು ದೇವಸ್ಯಮ್ ಬೋರ್ಡಿನಲ್ಲಿ ಹಿಂದೂಯೇತರರನ್ನು ಸೇರಿಸಿಕೊಳ್ಳಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. ಈ ಮಸೂದೆಯು ಸಂವಿಧಾನದ ವಿರುದ್ಧ ನಡೆಸಲಾಗುವ ಆಕ್ರಮಣ ಎಂದವರು ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯನ್ನು ಗಮನದಲ್ಲಿಟ್ಟು ಈ ಮಸೂದೆಯನ್ನು ತರಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ದೇಶದ ಮತದಾರರು ನೀಡಿದ ತೀರ್ಪಿನಿಂದ ನೀವು ಪಾಠ ಕಲಿತಿಲ್ಲ. ಆರಾಧನಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ ವಖ್ಫ್ ಬೋರ್ಡ್ ಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳುವ ಕುರಿತಂತೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದರು. ಪ್ರತಿಪಕ್ಷಗಳು ಈ ಮಸೂದೆಯ ಕುರಿತಂತೆ ತಪ್ಪು ಅಭಿಪ್ರಾಯಗಳನ್ನು ಪ್ರಚಾರ ಮಾಡುತ್ತಿವೆ. ನ್ಯಾಯ ಲಭಿಸದ ಮುಸ್ಲಿಂ ಸಹೋದರರಿಗೆ ಈ ಮಸೂದೆಯಿಂದ ನ್ಯಾಯ ಸಿಗಲಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಸಿದುಕೊಳ್ಳುವುದಕ್ಕಾಗಿ ಈ ಮಸೂದೆಯನ್ನು ನಾವು ಮಂಡಿಸುತ್ತಿಲ್ಲ. ವಕ್ಪ ಕೌನ್ಸಿಲ್ ಮತ್ತು ವಕ್ ಬೋರ್ಡ್ ನ ಸಬಲೀಕರಣಕ್ಕಾಗಿ ಮಸೂದೆಯನ್ನು ತಯಾರಿಸಿದ್ದೇವೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ