ಇನ್ನು ದಿನಾ ಟಿವಿಯಲ್ಲಿ ಬಿಜೆಪಿಯವರ ಸಿನಿಮಾ ಬರುತ್ತದೆ | ಡಿ.ಕೆ.ಶಿವಕುಮಾರ್ ಹೇಳಿಕೆ - Mahanayaka

ಇನ್ನು ದಿನಾ ಟಿವಿಯಲ್ಲಿ ಬಿಜೆಪಿಯವರ ಸಿನಿಮಾ ಬರುತ್ತದೆ | ಡಿ.ಕೆ.ಶಿವಕುಮಾರ್ ಹೇಳಿಕೆ

07/03/2021

ತುಮಕೂರು: ಪ್ರತಿ ದಿನ ನೀವು ಬಿಜೆಪಿಯವರ ಸಿನಿಮಾ ಟಿವಿಯಲ್ಲಿ ನೋಡುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದು, ಬಿಜೆಪಿ ನಾಯಕರ ರಾಸಲೀಲೆ ಸಿಡಿ ಬಿಡುಗಡೆ ವಿಚಾರವಾಗಿ ಅವರು ಬಿಜೆಪಿಯವರ ಸಿನಿಮಾ ಪ್ರತಿ ದಿನ ನೀವು ನೋಡುತ್ತೀರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.


Provided by

ಮಧುಗಿರಿಯಲ್ಲಿ ನಡೆದ ನೂತನ ಗ್ರಾಮ ಪಂಚಾಯತ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡಿದ ಅವರು,  ಕೆಲವರು ಕುರ್ಚಿಗೆ ಗೌರವ ತರುತ್ತಾರೆ. ಇನ್ನು ಕೆಲವರು ಕುರ್ಚಿಗಾಗಿ ಗೌರವ ಕಳೆಯುತ್ತಾರೆ ಎಂದು ಮಾರ್ಮಿಕವಾಗಿ ಸಿಡಿ ಪ್ರಕರಣಕ್ಕೆ ಟಾಂಗ್ ನೀಡಿದರು.

ಯಡಿಯೂರಪ್ಪನವರು ಮುಂದಿನ ಬಾರಿ 150 ಸೀಟು ಪಡೆಯುತ್ತೇವೆ ಎಂದು ಹೇಳುತ್ತಾರೆ. ದಿನಾ ಟಿವಿಯಲ್ಲಿ  ಬಿಜೆಪಿ ಸಿನಿಮಾ ಬರುತ್ತಿದೆ ಹಾಗಾಗಿ ಮುಂದಿನ 150 ಸೀಟು ಬಿಜೆಪಿಯದ್ದಲ್ಲ, ಕಾಂಗ್ರೆಸ್ ಪಕ್ಷದ್ದು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ