ಬಿಜೆಪಿ ಹಣ ನೀಡಿದರೆ ಪಡೆಯಿರಿ, ಮತ ಟಿಎಂಸಿಗೆ ಹಾಕಿ | ಮತದಾರರಿಗೆ ಮಮತಾ ಬ್ಯಾನರ್ಜಿ ಕರೆ - Mahanayaka
2:30 AM Wednesday 15 - October 2025

ಬಿಜೆಪಿ ಹಣ ನೀಡಿದರೆ ಪಡೆಯಿರಿ, ಮತ ಟಿಎಂಸಿಗೆ ಹಾಕಿ | ಮತದಾರರಿಗೆ ಮಮತಾ ಬ್ಯಾನರ್ಜಿ ಕರೆ

07/03/2021

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ತಂತ್ರಗಳಿಗೆ  ಮಮತಾ ಬ್ಯಾನರ್ಜಿ ಪ್ರತಿ ತಂತ್ರ ಹೂಡಿದ್ದಾರೆ. ಬಿಜೆಪಿಯವರು ಹಣ ನೀಡಿದರೆ ತೆಗೆದುಕೊಳ್ಳಿ ಆದರೆ, ಮತ ತೃಣಮೂಲ ಕಾಂಗ್ರೆಸ್ ಗೆ ಹಾಕಿ ಎಂದು ಭಾನುವಾರ ಮಮತಾ ಬ್ಯಾನರ್ಜಿ ಜನರಿಗೆ ಕರೆ ನೀಡಿದ್ದಾರೆ.


Provided by

ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ರ್ಯಾಲಿ ನಡೆಸಿದ ಬಳಿಕ ಸಿಲಿಗುರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿಯವರ ಆಟಗಳಿಗೆ ವಿರುದ್ಧವಾಗಿ ನಾವು ಆಡಲು ಸಿದ್ಧರಾಗಬೇಕು. ಅವರು ನಿಮ್ಮ ಮತಗಳನ್ನು ಖರೀದಿಸಲು ಯತ್ನಿಸಿದರೆ, ಹಣ ತೆಗೆದುಕೊಳ್ಳಿ, ನಿಮ್ಮ ಮತಗಳನ್ನು ಟಿಎಂಸಿಗೆ ನೀಡಿ ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದರು.

ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ,   ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು  ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಹಾಗೂ ಬಿಹಾರದ ಮಹಿಳೆಯರು ಎಷ್ಟು ಸುರಕ್ಷಿತವಾಗಿದೆ ಎನ್ನುವುದನ್ನು ನೋಡಿ, ಹೇಳಿಕೆ ನೀಡಲಿ ಎಂದರು.

ಇತ್ತೀಚಿನ ಸುದ್ದಿ