ನನಗೆ 66 ವರ್ಷ ವಯಸ್ಸಾಗಿದೆ ಟಿಕೆಟ್ ನೀಡಿ | ಬಿಜೆಪಿಯ ಬೆನ್ನು ಬಿದ್ದ ಮುತಾಲಿಕ್ - Mahanayaka

ನನಗೆ 66 ವರ್ಷ ವಯಸ್ಸಾಗಿದೆ ಟಿಕೆಟ್ ನೀಡಿ | ಬಿಜೆಪಿಯ ಬೆನ್ನು ಬಿದ್ದ ಮುತಾಲಿಕ್

07/03/2021


Provided by

ಬೆಳಗಾವಿ:  ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಸಂಸ್ಥಾಪಕ ಮುತಾಲಿಕ್ ಬಿಜೆಪಿ ಬೆನ್ನು ಬಿದ್ದಿದ್ದು, ಬಿಜೆಪಿಯವರು ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.

ನನಗೆ 66 ವರ್ಷ ವಯಸ್ಸಾಗಿದೆ, ಇದೇ ನನ್ನ ಕೊನೆಯ ಚುನಾವಣೆ. ಹಾಗಾಗಿ ನನಗೆ ಟಿಕೆಟ್ ನೀಡಿ ಎಂದು ತಾನು ಮನವಿ ಮಾಡಿದ್ದೇನೆ ಎಂದು ಮುತಾಲಿಕ್ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನೂ ಮೂರು ವರ್ಷ ಅವಧಿ ಇದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅಭಿವೃದ್ಧಿ,ಹಿಂದುತ್ವದ ಕೆಲಸ ಮಾಡುತ್ತೇನೆ. ಒಂದು ವೇಳೆ ಟಿಕೆಟ್‌ ಸಿಗದೆ ಸುರೇಶ್‌ ಅಂಗಡಿಯವರ ಕುಟುಂಬಕ್ಕೋ, ಜಗದೀಶ್‌ ಶೆಟ್ಟರ್‌ ಕುಟುಂಬಕ್ಕೋ ಕೊಟ್ಟರೆ ಅವರು ನನ್ನನ್ನು ಪ್ರಚಾರಕ್ಕೆ ಕರೆದರೆ ಅವರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ