ಆಗಸ್ಟ್ 26: ಶ್ರೀ ಕೃಷ್ಣ ಜನ್ಮಾಷ್ಠಮಿ ಸೇವಾ ಸಮಿತಿ ಕಲ್ಲಗುಡ್ಡೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ - Mahanayaka
8:22 AM Thursday 16 - October 2025

ಆಗಸ್ಟ್ 26: ಶ್ರೀ ಕೃಷ್ಣ ಜನ್ಮಾಷ್ಠಮಿ ಸೇವಾ ಸಮಿತಿ ಕಲ್ಲಗುಡ್ಡೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

Sri Krishna Janmashtami
22/08/2024

ಸುಳ್ಯ: ಶ್ರೀ ಕೃಷ್ಣ ಜನ್ಮಾಷ್ಠಮಿ ಸೇವಾ ಸಮಿತಿ ಕಲ್ಲಗುಡ್ಡೆ ಇದರ ವತಿಯಿಂದ 14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಗಸ್ಟ್ 26ರಂದು ಕಲ್ಲಗುಡ್ಡೆ ಮೈದಾನದಲ್ಲಿ ನಡೆಯಲಿದೆ.


Provided by

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಕಲ್ಲಗುಡ್ಡೆಯವರು ವಹಿಸಲಿದ್ದು, ಉದ್ಘಾಟನೆಯನ್ನು ಸ್ಥಳೀಯ ಪುಟಾಣಿ ಮಕ್ಕಳು ನೆರವೇರಿಸಲಿದ್ದಾರೆ. ಅಥಿತಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ಸರೋಜೀನಿ ಕರಿಯಮೂಲೆ, ದೇವಕಿ ಕಾಟಿಪಳ್ಳ, ಗೀತಾ ಕಲ್ಲಗುಡ್ಡೆ ಹಾಗೂ ಮಹೇಶ್ ರೈ ಮೇನಾಲ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ, ರಂಜೀತ್ ರೈ ಮೇನಾಲ ಗ್ಯಾರಂಟಿ ಅನುಷ್ಠಾನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರು, ಡಾ.ಅವಿನಾಶ್ ಅಜ್ಜಾವರ ಆಯುರ್ವೇದ ಕಾಲೇಜು ಸುಳ್ಯ, ಸುರೇಶ್ ಕಾಟಿಪಳ್ಳ ಶಿಕ್ಷಕರು, ರಾಜು ಪಂಡಿತ್ ಸುಳ್ಯ ಶಾರಾದಾಂಬ ಸೇವಾ ಸಮಿತಿ ಸುಳ್ಯ, ಮನೋಹರ್ ಪಲ್ಲತ್ತಡ್ಕ, ಅರಣ್ಯ ರಕ್ಷಕರು, ರಾಜೇಶ್ ಪಣಿಕ್ಕರ್ ಇರಂತಮಜಲು ದೈವ ನರ್ತಕರು, ಬಾಲಕೃಷ್ಣ ದೊಡ್ಡೇರಿ ಅಧ್ಯಕ್ಷರು ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಭಾಗವಹಿಸಿಲಿದ್ದಾರೆ.

ಸಾರ್ವಜನಿಕರಿಗೆ ಆಟೋಟ ಸ್ಪರ್ದೆ ನಡೆಯಲಿದೆ. ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಊರಿನ ಪರವೂರಿನ ಎಲ್ಲಾ ಬಂಧುಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಲ್ಲಗುಡ್ಡೆ ಪತ್ರಿಕಾ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ