ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ  ತಹಶೀಲ್ದಾರ್ ಗೆ ಮನವಿ - Mahanayaka
5:42 AM Wednesday 27 - August 2025

ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ  ತಹಶೀಲ್ದಾರ್ ಗೆ ಮನವಿ

hassan
26/08/2024


Provided by

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿಗೆ ನೂತನವಾಗಿ ಆಗಮಿಸಿರುವ ತಹಶೀಲ್ದಾರ್ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿ ಎಐಸಿಸಿ ಮಾನವ ಹಕ್ಕು ಅಧ್ಯಕ್ಷ ವರುಣ್ ಚಕ್ರವರ್ತಿ ಅವರು ಅಭಿನಂದಿಸಿದರು. ಇದೇ ವೇಳೆ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ದೂರು ನೀಡಿದರು.

ನಮ್ಮ ಹಾಸನ ಜಿಲ್ಲೆಯಲ್ಲಿ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ಆಧಾರರಹಿತವಾಗಿ ಕೈಸಾಲ ನೀಡಿ ದುಬಾರಿ ಬಡ್ಡಿ ವಿಧಿಸಿ ದೌರ್ಜನ್ಯವೆಸಗುವ ಮೈಕ್ರೋಫೈನಾನ್ಸ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು ಮತ್ತು ಕಾನೂನುಬಾಹಿರ ನಡೆದ  ಸಾಲಗಳನ್ನು ಖಾಸಗಿ ಕಾನೂನು ಸಾಲಗಳಿಂದ ಪರಿಗಣಿಸಿ ರಾಜ್ಯ ಸರ್ಕಾರ ಕಾನೂನು ತರಬೇಕೆಂದು ಒತ್ತಾಯಿಸಿದರು.

ರೈತಾಪಿ ಹಾಗೂ ಸಾರ್ವಜನಿಕರು ಬಡಜನರಿಗೆ ಖಾಸಗಿ ಮೈಕ್ರೋಫೈನಾನ್ಸ್ ಗಳು ಸಾಲ– ಬಡ್ಡಿ ಹೆಸರಿನಲ್ಲಿ ರೈತರ ಕಷ್ಟಗಳನ್ನು ಲೆಕ್ಕಿಸದೆ ಏಜೆನ್ಸಿಗಳ ಮೂಲಕ ದಬ್ಬಾಳಿಕೆ ಮಾಡುತ್ತಿರುವುದರಿಂದ ಎಷ್ಟರಮಟ್ಟಿಗೆ ಸರಿ? ಜಪ್ತಿ ವಸೂಲಿ ಎಂದು ಹಣ ಪಡೆಯುತ್ತಾರೆ ಅದನ್ನು ಸಾಲಕ್ಕೆ ಬಳಸಿಕೊಳ್ಳುವುದಿಲ್ಲ.   ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಮಾಯಕ ಮಹಿಳೆಯರ ವಿರುದ್ಧ ದಬ್ಬಾಳಿಕೆ ನಡೆಸುತ್ತಲಿದೆ. ಒಂದು ವೇಳೆ ದಬ್ಬಾಳಿಕೆ ನಡೆಸಿದರೆ ತೀವ್ರತರದ ಹೋರಾಟ ಮಾಡಲಾಗುವುದು ಎಂದು ವರುಣ್ ಚಕ್ರವರ್ತಿ ಎಚ್ಚರಿಕೆ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ  ಈ ಕಂಪೆನಿಗಳ ತುಂಬಾ ಇದ್ದಾವೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಎಐಸಿಸಿ ಮಾನವ ಹಕ್ಕು ಹಾಸನ ಜಿಲ್ಲಾ ಅಧ್ಯಕ್ಷ ವರುಣ್ ಚಕ್ರವರ್ತಿ ಡಿಎಸ್ ಎಸ್ ಸಂಚಾಲಕ ಮನೋಜ್ ನಾಯಕ್, ಡಿ ಎಸ್ ಎಸ್ ಮುಖಂಡರು ಅನೀಫ್ ಹಾಗೂ ಅಜಿತ್ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ