ಆರೆಸ್ಸೆಸ್ ನ ಚಿಂತನ ಗಂಗಾ ಪುಸ್ತಕದ ಬಗ್ಗೆ ಹಂಸಲೇಖ ಹೇಳಿದ್ದೇನು?

ಬೆಂಗಳೂರು: ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ ಎಸ್ ಎಸ್ ನ ಚಿಂತನ ಗಂಗಾ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಆ ಪುಸ್ತಕ ಎಷ್ಟು ಕೆಲಸ ಮಾಡುತ್ತೆ ಎಂದರೇ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧದವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಮೂಲಕ ಮೆಸೇಜ್ ಕಳುಹಿಸುತ್ತಾರೆ ಅಂತ ನಾದ ಬ್ರಹ್ಮ ಹಂಸಲೇಖ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಕನ್ನಡದ ಪಕ್ಷ ಕಟ್ಟುವವರಿಗೂ ಅಂತಹ ಒಂದು ಮಾರ್ಗಸೂಚಿಯ ಅವಶ್ಯಕತೆ ಇದೆ. ಅದು ಚಿಂತನ ಗಂಗಾದಂತಿರದೆ ನಾಡನ್ನ ಕಟ್ಟುವಂತೆ ಇರ್ಬೇಕು ಅಂತ ಹೇಳಿದರು.
ಪ್ರತಿ ಕನ್ನಡಿಗ ಸಂವಿಧಾನದ ಜೊತೆ ಕನ್ನಡದ ಠರಾವನ್ನು ಇರಿಸಿಕೊಳ್ಳಬೇಕು ಎಂದು ಹಂಸಲೇಖ ಈ ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ, ಬ್ರಾಹ್ಮಣರ ಮನೆಯಲ್ಲಿ ಆರೆಸ್ಸೆಸ್ ನ ಚಿಂತನ ಗಂಗಾ ಪುಸ್ತಕ ಇರುತ್ತದೆ ಎನ್ನುವ ವಿಚಾರ ಹೇಳಿರುವುದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth