ಜೈಲು ಸೇರಿದ ಬಳಿಕ 15 ಕೆ.ಜಿ. ತೂಕ ಕಳೆದುಕೊಂಡಿರುವ ನಟ ದರ್ಶನ್! - Mahanayaka

ಜೈಲು ಸೇರಿದ ಬಳಿಕ 15 ಕೆ.ಜಿ. ತೂಕ ಕಳೆದುಕೊಂಡಿರುವ ನಟ ದರ್ಶನ್!

darshan
01/09/2024


Provided by

ನಟ ದರ್ಶನ್ ಅವರು ಜೈಲು ಸೇರಿದ ಬಳಿ  15 ಕೆಜಿ ತೂಕ ಕಳೆದುಕೊಂಡಿದ್ದಾರಂತೆ. ಜೂನ್ 11 ರಂದು ಬಂಧಿಸಲಾಗಿತ್ತು. 14 ದಿನಗಳ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ದರ್ಶನ್ ಅವರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾಗ ಇದ್ದ ತೂಕಕ್ಕೂ ಈಗ ಬಳ್ಳಾರಿ ಜೈಲಿಗೆ ಬಂದಾಗ ಇದ್ದ ತೂಕಕ್ಕೂ ಸುಮಾರು 15 ಕೆ.ಜಿ. ತೂಕ ವ್ಯತ್ಯಾಸವಿದೆಯಂತೆ. ತೂಕದ ಜೊತೆಗೆ ನಟ ದರ್ಶನ್ ಗೆ ಬೆನ್ನುನೋವು ಕೂಡ ಕಾಣಿಸಿಕೊಂಡಿದೆಯಂತೆ.

ಇನ್ನೂ ಬೆನ್ನು ನೋವಿನ ಕಾರಣ ಭಾರತೀಯ ಶೈಲಿಯ ಶೌಚಾಲಯ ಬಳಸಲು ಸಾಧ್ಯವಾಗದೇ ದರ್ಶನ್ ಜೈಲಿನಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಪಾಶ್ಚಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಅಂತ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಐಜಿ ಶೇಷಾ ಅವರು ಬೆನ್ನು ನೋವಿಗೆ ಜೈಲಿನ ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ. ಹಿಂದಿನ ಚಿಕಿತ್ಸೆಗಳ ಮಾಹಿತಿಯನ್ನ ಕೇಳಿದ್ದೇವೆ. ಅದನ್ನು ಪರಿಶೀಲಿಸಿ ಚಿಕಿತ್ಸೆ ನೀಡಲಾಗುವುದು ಅಂತ ಅವರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ