ವೈದ್ಯಕೀಯ ಪರೀಕ್ಷೆಯಲ್ಲಿ ಆಯಿಷಾ ನಮ್ರಗೆ ಶೇ.73 ಫಲಿತಾಂಶ - Mahanayaka
12:03 AM Thursday 21 - August 2025

ವೈದ್ಯಕೀಯ ಪರೀಕ್ಷೆಯಲ್ಲಿ ಆಯಿಷಾ ನಮ್ರಗೆ ಶೇ.73 ಫಲಿತಾಂಶ

aisha namra
06/09/2024


Provided by

ಕೊಟ್ಟಿಗೆಹಾರ: ಕೊಟ್ಟಿಗೆಹಾರದ ನಿವಾಸಿ, ಪ್ರಸನ್ನ ಕಾಲೇಜಿನ  ವಿದ್ಯಾರ್ಥಿನಿ ಆಯಿಷಾ ನಮ್ರ ವೈದ್ಯಕೀಯ ಪರೀಕ್ಷೆಯಲ್ಲಿ ಶೇ.73 ಅಂಕ ಪಡೆಯುವ ಮೂಲಕ ಕಾಫಿನಾಡಿಗೆ ಹೆಸರು ತಂದಿದ್ದಾರೆ.

ಆಯಿಷಾ ನಮ್ರ ಕೊಟ್ಟಿಗೆಹಾರದ ಅಸ್ಗರ್ ಹುಸೇನ್ ಹಾಗೂ ರುಕ್ಸಾನ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ರಿವರ್ ವ್ಯೂವ್ ಶಾಲೆಯಲ್ಲಿ ಮುಗಿಸಿ ಪ್ರೌಢಶಾಲಾ ಶಿಕ್ಷಣವನ್ನು ಬಣಕಲ್ ಪ್ರೌಢಶಾಲೆಯಲ್ಲಿ ಕಲಿತು, ಪಿಯುಸಿ ಶಿಕ್ಷಣವನ್ನು ಮೂಡಿಗೆರೆಯ ಹರೀಶ್ ಪಿಯು ಕಾಲೇಜಿನಲ್ಲಿ ಮುಗಿಸಿದರು.

ಬಳಿಕ ವೈದ್ಯಕೀಯ ಶಿಕ್ಷಣ ಪಡೆಯಲು ಬೆಳ್ತಂಗಡಿಯ ಪ್ರಸನ್ನ ಕಾಲೇಜಿಗೆ ಪ್ರವೇಶ ಪಡೆದು   ಬಿಎಎಂಎಸ್ ಆಯುರ್ವೇದ ವೈದ್ಯ ಪರೀಕ್ಷೆಯಲ್ಲಿ ಶೇ 73 ಫಲಿತಾಂಶ ಪಡೆದು ಕಾಫಿನಾಡಿಗೆ ಹೆಮ್ಮೆ ತಂದಿದ್ದಾರೆ. ಈ ವೈದ್ಯೆ ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ