ಇಸ್ರೇಲನ್ನು ಮಟ್ಟ ಹಾಕಲು ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಬೇಕು: ತುರ್ಕಿ ಅಧ್ಯಕ್ಷರ ಕರೆ - Mahanayaka
9:01 PM Wednesday 20 - August 2025

ಇಸ್ರೇಲನ್ನು ಮಟ್ಟ ಹಾಕಲು ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಬೇಕು: ತುರ್ಕಿ ಅಧ್ಯಕ್ಷರ ಕರೆ

09/09/2024


Provided by

ಇಸ್ರೇಲನ್ನು ಮಣಿಸುವುದಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ರಚನೆಯಾಗಬೇಕು ಎಂದು ತುರ್ಕಿ ಅಧ್ಯಕ್ಷ ಉರ್ದುಗನ್ ಕರೆ ಕೊಟ್ಟಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ತನ್ನ ನಿಯಂತ್ರಣವನ್ನು ಬಲಪಡಿಸುವುದಕ್ಕೆ ಮತ್ತು ಇನ್ನಷ್ಟು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದಕ್ಕೆ ಇಸ್ರೇಲ್ ಮುಂದಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ಇಸ್ರೇಲ್ ಅನ್ನು ತಡೆಯುವುದಕ್ಕೆ ಮುಸ್ಲಿಂ ರಾಷ್ಟ್ರಗಳು ಜೊತೆಯಾಗುವುದೊಂದೇ ಏಕೈಕ ಪರಿಹಾರ ಎಂದವರು ಹೇಳಿದ್ದಾರೆ. ಈಜಿಪ್ಟ್ ಮತ್ತು ಸಿರಿಯಾದ ನಡುವೆ ರಾಜ ತಾಂತ್ರಿಕ ಸಂಬಂಧವನ್ನು ಮರು ಸ್ಥಾಪಿಸಿ ಮರಳಿ ಸಂಬಂಧ ಸುಧಾರಿಸುವುದಕ್ಕೆ ತುರ್ಕಿ ಮಧ್ಯಸ್ಥಿಕೆ ವಹಿಸಿದೆ. ಇಸ್ರೇಲ್ ಅತಿಕ್ರಮಿಸಿರುವ ಪಶ್ಚಿಮ ದಂಡೆಯಲ್ಲಿ ತುರ್ಕಿ ಮೂಲದ ಅಮೆರಿಕನ್ ವ್ಯಕ್ತಿಯನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿರುವ ಬೆನ್ನಿಗೆ ಉರ್ದುಗಾನ್ ಹೇಳಿಕೆ ನೀಡಿದ್ದಾರೆ. ಲೆಬನಾನ್ ಮತ್ತು ಸಿರಿಯಾದ ಮೇಲೂ ಇಸ್ರೇಲ್ ದಾಳಿ ನಡೆಸುತ್ತಿರುವುದನ್ನೂ ಉರ್ದುಗನ್ ನೆನಪಿಸಿದ್ದಾರೆ.

1918ರಲ್ಲಿ ಇಸ್ಲಾಮಿ ಸಾಮ್ರಾಜ್ಯದ ಕೈಯಿಂದ ತಪ್ಪಿ ಹೋದ ಫೆಲಸ್ತೀನ್ ನ ಇಂಚಿಂಚು ಜಾಗವನ್ನೂ ಇಸ್ರೇಲ್ ಈಗ ವಶಪಡಿಸಿಕೊಳ್ಳುತ್ತಿದೆ ಎಂದು ಉರ್ದುಗಾನ್ ಹೇಳಿದ್ದಾರೆ.
ವಿಶಾಲ ಫೆಲೆ ಸ್ತೀನ್ ಇವತ್ತು ರಮಲ್ಲ ಮತ್ತು ಗಾಜಾಕ್ಕೆ ಸೀಮಿತಗೊಂಡಿದೆ. ಇದೀಗ ಪಶ್ಚಿಮ ದಂಡೆ ಮತ್ತು ಗಾಜವನ್ನು ಕೂಡ ಇಸ್ರೇಲ್ ವಶಪಡಿಸಿಕೊಳ್ಳುತ್ತಿದೆ. ಪ್ರಾಯ ನೋಡದೆ ಮತ್ತು ಲಿಂಗ ನೋಡದೆ ಜನರನ್ನು ಹತ್ಯೆ ಮಾಡುತ್ತಿದೆ ಎಂದು ಉರ್ದುಗಾನ್ ಹೇಳಿದ್ದಾರೆ. ಇದು ಇಸ್ರೇಲ್ ಮತ್ತು ಫೆಲೆ ಸ್ತೀನ್ ನಡುವಿನ ಯುದ್ಧವಲ್ಲ.

ಸಾಮ್ರಾಜ್ಯ ಶಾಹಿ ಯಾಗಿರುವ ಜಿಯೋನಿಷ್ಟು ಗಳು ಮತ್ತು ತಮ್ಮ ಜನ್ಮ ಭೂಮಿಗಾಗಿ ಹೋರಾಡುತ್ತಿರುವ ಮುಸ್ಲಿಮರ ನಡುವಿನ ಯುದ್ಧವಾಗಿದೆ ಎಂದವರು ಹೇಳಿದ್ದಾರೆ. ಇದನ್ನು ಕಾಣದಂತೆ ನಟಿಸುತ್ತಿರುವ ಮುಸ್ಲಿಂ ರಾಷ್ಟ್ರಗಳು ಮತ್ತು ತುರ್ಕಿ ಕೂಡ ಈ ಪಾಪದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ