ನಾನು ಮೋದಿ ದ್ವೇಷಿಯಲ್ಲ: ನನಗಿರುವುದು ವೈಚಾರಿಕ ವಿರೋಧ ಮಾತ್ರ ಎಂದ ರಾಹುಲ್ ಗಾಂಧಿ - Mahanayaka

ನಾನು ಮೋದಿ ದ್ವೇಷಿಯಲ್ಲ: ನನಗಿರುವುದು ವೈಚಾರಿಕ ವಿರೋಧ ಮಾತ್ರ ಎಂದ ರಾಹುಲ್ ಗಾಂಧಿ

10/09/2024

ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ದ್ವೇಷಿಸುತ್ತಿಲ್ಲ. ಅವರ ಜೊತೆ ನನಗಿರುವುದು ವೈಚಾರಿಕ ವಿರೋಧ ಮಾತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ವಾಷಿಂಗ್ಟನ್ ಡಿ ಸಿ ಯ ಜಾರ್ಜ್ ಟೌನ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Provided by

ಭಾರತ ಅಂದರೆ ವಿವಿಧ ಭಾಷೆ ಪರಂಪರೆ ಇತಿಹಾಸ ಧರ್ಮ ಇತ್ಯಾದಿಗಳು ಒಂದು ಗೂಡಿರುವ ಹೃದಯವಾಗಿದೆ. ಇಲ್ಲಿ ಮಧ್ಯಾಹ್ನದ ಭೋಜನ ಸೇವಿಸುವಾಗ ಮೊದಲ ಕೋರ್ಸ್, ಎರಡನೇ ಕೋರ್ಸ್ ಎಂದೆಲ್ಲಾ ಇದೆ. ಆದರೆ ನಮ್ಮಲ್ಲಿ ಹಾಗಿಲ್ಲ. ನಮಗೆ ಒಂದು ತಾಲಿ ಲಭಿಸುತ್ತದೆ. ಅದರಲ್ಲಿ ಎಲ್ಲವೂ ಇರುತ್ತದೆ. ಅದೊಂದು ಆಹಾರದ ಗುಂಪಾಗಿದೆ. ಎಲ್ಲಾ ಆಹಾರಕ್ಕೂ ಒಂದೇ ಮೌಲ್ಯವಾಗಿದೆ.

ಜೊತೆಯಾಗಿರುವುದು ಮತ್ತು ಭಿನ್ನ-ಭಿನ್ನವಾಗಿರುವುದೇ ಭಾರತವಾಗಿದೆ ಎಂದವರು ಸಂವಾದದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು. ಮಿಸ್ಟರ್ ಮೋದಿಯನ್ನು ನಾನು ದ್ವೇಷಿಸುತ್ತಿಲ್ಲ. ಅವರಿಗೆ ಒಂದು ವಿಚಾರಧಾರೆ ಇದೆ. ಅವರ ಆ ವಿಚಾರಧಾರೆಯೊಂದಿಗೆ ನನಗೆ ಸಹಮತವಿಲ್ಲ. ಆದರೆ ನಾನು ಅವರನ್ನು ದ್ವೇಷಿಸುವುದಿಲ್ಲ. ಅವರು ನನ್ನ ಶತ್ರು ಎಂದು ನಾನು ಬಗೆಯುವುದಿಲ್ಲ. ಅವರು ಮಾಡುವ ಕೆಲಸಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯ ಇದೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ