ಅಣ್ಣನ ಪ್ರೀತಿ ವಿಚಾರಕ್ಕೆ ಗಲಾಟೆ: ಚಾಕುವಿನಿಂದ ಇರಿದು ತಮ್ಮನ ಬರ್ಬರ ಹತ್ಯೆ! - Mahanayaka
2:01 PM Saturday 18 - October 2025

ಅಣ್ಣನ ಪ್ರೀತಿ ವಿಚಾರಕ್ಕೆ ಗಲಾಟೆ: ಚಾಕುವಿನಿಂದ ಇರಿದು ತಮ್ಮನ ಬರ್ಬರ ಹತ್ಯೆ!

kalaburgi
22/09/2024

ಕಲಬುರಗಿ:  ಅಣ್ಣನ ಪ್ರೀತಿಯ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಮ್ಮನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.


Provided by

ಸುಮಿತ್‌ ಮಲ್ಲಾಬಾದ್(19) ಹತ್ಯೆಗೀಡಾದ ಯುವಕನಾಗಿದ್ದಾನೆ. ತಂದೆ ತಾಯಿಯೊಂದಿಗೆ ಮುಂಬೈನಲ್ಲಿ ವಾಸವಿದ್ದ ಈತ ಕಳೆದ ವಾರ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ.

ಸುಮಿತ್ ನ ಸಹೋದರ ಸಚಿನ್  ತನ್ನ ಏರಿಯಾದ  ಯುವತಿಯನ್ನು ಪ್ರೀತಿಸುತ್ತಿದ್ದ ಸಾಕಷ್ಟು ನ್ಯಾಯ ಪಂಚಾಯತಿ ನಡೆದರೂ ಅದು ಬಗೆಹರಿದಿರಲಿಲ್ಲ. ನಿನ್ನೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಸಚಿನ್ ಮನೆಗೆ ಬಂದಿದ್ದಾರೆ. ಈ ವೇಳೆ ಸಚಿನ್ ಮನೆಯಲ್ಲಿರಲಿಲ್ಲ. ಹೀಗಾಗಿ  ಸುಮಿತ್ ಮತ್ತು ಆತನ ತಾಯಿಯೊಂದಿಗೆ ಜಗಳ ಆರಂಭಿಸಿದ್ದು, ಸುಮಿತ್ ಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ತಕ್ಷಣವೇ ತಾಯಿ ಆತನನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ