ವೈಯಾಲಿಕಾವಲ್ ಮಹಾಲಕ್ಷ್ಮೀ ಕೇಸ್: ಹಂತಕನ ಪತ್ತೆಗೆ ಪೊಲೀಸರು ಹಾಕಿದ ಪ್ಲಾನ್ ಏನು? - Mahanayaka

ವೈಯಾಲಿಕಾವಲ್ ಮಹಾಲಕ್ಷ್ಮೀ ಕೇಸ್: ಹಂತಕನ ಪತ್ತೆಗೆ ಪೊಲೀಸರು ಹಾಕಿದ ಪ್ಲಾನ್ ಏನು?

vayalikaval mahalakshmi
23/09/2024


Provided by

ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕೇಂದ್ರ ವಿಭಾಗದ ಐವರು ಇನ್‌ಸ್ಪೆಕ್ಟರ್‌ಗಳ ನೇತೃತ್ವದ 5 ತಂಡಗಳು ಆರೋಪಿಯ ಬಂಧನಕ್ಕೆ ಕಾರ್ಯಾಚರಣೆಗಿಳಿದಿದೆ. ಈಗಾಗಲೇ ಮಹಾಲಕ್ಷ್ಮೀ ಜೊತೆಗೆ ಕಳೆದ 3 ತಿಂಗಳುಗಳಿಂದ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಮಹಾಲಕ್ಷ್ಮೀ ಎಲ್ಲಿ ಕೆಲಸ ಮಾಡುತ್ತಿದ್ದಳು, 3 ತಿಂಗಳುಗಳಿಂದ ಯಾರ ಜೊತೆಗೆ ಸಂಪರ್ಕದಲ್ಲಿದ್ದಳು. ಆಕೆಯ ಚಲನವಲನಗಳು ಹೇಗಿದ್ದವು ಎನ್ನುವ ಮಾಹಿತಿಯನ್ನ ಪೊಲೀಸರ ತಂಡ ಕಲೆ ಹಾಕುತ್ತಿದೆ.

ಕೊಲೆ ನಡೆದ ಏರಿಯಾದಲ್ಲಿ ಸಿಸಿ ಟಿವಿಗಳ ದೃಶ್ಯ ಪರಿಶೀಲನೆ ಮಾಡಲಾಗುತ್ತಿದೆ.  ಈ ಪ್ರದೇಶದ ಸುಮಾರು 150ಕ್ಕೂ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಇನ್ನೂ ಮಹಾಲಕ್ಷ್ಮೀಗೆ ಕೊನೆಯ ಬಾರಿ ಕರೆ ಮಾಡಿದವರ ವಿವರ ತೆಗೆಯಲಾಗುತ್ತಿದೆ. ಒಂದು ತಿಂಗಳುಗಳಿಂದ ಯಾರ ಜೊತೆಗೆ ಹೆಚ್ಚು ಫೋನ್ ನಲ್ಲಿ ಸಂಪರ್ಕದಲ್ಲಿದ್ದಳು ಎನ್ನುವುದನ್ನು ಸಂಗ್ರಹಿಸಲಾಗುತ್ತಿದೆ.

ಮುಖ್ಯವಾಗಿ ಹೊರ ರಾಜ್ಯದಲ್ಲಿ ಇರುವವರು ಸಂಪರ್ಕದಲ್ಲಿ ಇದ್ದರೆ, ಮಹಾಲಕ್ಷ್ಮೀಯ ಕಾಂಟೆಕ್ಟ್ ಲಿಸ್ಟ್ ನಲ್ಲಿದ್ದವರು ಕೊಲೆ ನಡೆದ ಸ್ಥಳದಲ್ಲಿ ಇದ್ದರೆ ಎನ್ನುವ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಯಾರೇ ಇರಲಿ, ಆತನನ್ನ ಹಿಡಿದು ಕಾನೂನಿನಡಿಯಲ್ಲಿ ಶಿಕ್ಷೆ ಕೊಡಬೇಕು ಎನ್ನುವ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ರೀತಿಯ ಭೀಕರ ಕೃತ್ಯ ನಡೆಸಿರುವ ವ್ಯಕ್ತಿ ಎಷ್ಟೊಂದು ವಿಕೃತ ಇರಬೇಕು, ಇಂತಹ ಸೈಕೋ ಕಿಲ್ಲರ್ ಗಳನ್ನು ಪೊಲೀಸರು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ