ಮುನಿರತ್ನ ಮನೆಯಲ್ಲಿ ವಶಪಡಿಸಿಕೊಂಡ ಲ್ಯಾಪ್ ಟಾಪ್, ಪೆನ್ ಡ್ರೈವ್ ನಲ್ಲಿ ಹಲವು ನಾಯಕರ ಖಾಸಗಿ ವಿಡಿಯೋ ಪತ್ತೆ! - Mahanayaka
4:10 AM Thursday 16 - October 2025

ಮುನಿರತ್ನ ಮನೆಯಲ್ಲಿ ವಶಪಡಿಸಿಕೊಂಡ ಲ್ಯಾಪ್ ಟಾಪ್, ಪೆನ್ ಡ್ರೈವ್ ನಲ್ಲಿ ಹಲವು ನಾಯಕರ ಖಾಸಗಿ ವಿಡಿಯೋ ಪತ್ತೆ!

munirathna
02/10/2024

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಾಸಕ ಮುನಿರತ್ನ ಬಗ್ಗೆ ಸ್ಫೋಟಕ ವಿಚಾರವೊಂದು ಬಯಲಾಗಿದ್ದು, ಎಸ್ ಐಟಿ ಅಧಿಕಾರಿಗಳು ಮುನಿರತ್ನ ಮನೆಗೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಗಳಲ್ಲಿ ಬಿಜೆಪಿ ನಾಯಕರು ಸೇರಿದಂತೆ ಕೆಲವು ರಾಜಕೀಯ ನಾಯಕರ ಖಾಸಗಿ ಕ್ಷಣಗಳ ವಿಡಿಯೋಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.


Provided by

ಮುನಿರತ್ನರ ವೈಯಾಲಿ ಕಾವಲ್‌ ನಲ್ಲಿರುವ  ಮನೆಯಲ್ಲಿ ಶೋಧ ನಡೆಸುವ ವೇಳೆ ಸಿಕ್ಕ ಲ್ಯಾಪ್ ಟಾಪ್ ಮತ್ತು ಪೆನ್ ಡ್ರೈವ್ ಗಳಲ್ಲಿ ಕೆಲವು ರಾಜಕೀಯ ನಾಯಕರ, ಸರ್ಕಾರಿ ಅಧಿಕಾರಿಗಳ ವಿಡಿಯೋಗಳು ಪತ್ತೆಯಾಗಿದ್ದು, ಮಹಿಳೆಯರ ಅಶ್ಲೀಲ ವಿಡಿಯೋಗಳು ಕೂಡ ಇದ್ದು, ಹನಿ ಟ್ರ್ಯಾಪ್ ಮೂಲಕ ಈ ವಿಡಿಯೋ ಚಿತ್ರೀಕರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮುನಿರತ್ನರ ಮೊಬೈಲ್‌ನಲ್ಲಿ ಹನಿಟ್ರ್ಯಾಪ್‌ನ ಸಾಕಷ್ಟು ವಿಡಿಯೋ ಮತ್ತು ಆಡಿಯೋಗಳು ಇರುವ ಬಗ್ಗೆ ಸುಳಿವು ಸಿಕ್ಕಿದೆ.  ಮುನಿರತ್ನರ ಮೊಬೈಲ್‌ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಆದರೆ, ಆ ಮೊಬೈಲ್‌ ಕೋಲಾರದಲ್ಲಿ ಕಳೆದು ಹೋಗಿರುವುದಾಗಿ ಮುನಿರತ್ನ ಹೇಳಿದ್ದಾರೆ. ಮೊಬೈಲ್‌ ನ ಐಎಂಇಐ ನಂಬರ್‌ ವಿವರ ಆಧರಿಸಿ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಫ್‌ ಎಸ್‌ ಎಲ್‌ ಗೆ ರವಾನೆ ಹನಿಟ್ರ್ಯಾಪ್‌ ಆರೋಪಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಪ್ರಮುಖ ಪುರಾವೆಗಳಾಗುತ್ತವೆ. ಹೀಗಾಗಿ, ಲ್ಯಾಪ್‌ ಟಾಪ್‌ ಮತ್ತು ಪೆನ್‌ ಡ್ರೈವ್‌ ಗಳಲ್ಲಿಸಿಕ್ಕಿರುವ ವಿಡಿಯೊಗಳು ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ