ಪೊಲೀಸ್ ತನಿಖೆಯಲ್ಲಿ ಹಲವು ತಪ್ಪು ನಡೆದಿವೆ ಎಂದ ದರ್ಶನ್ ಪರ ವಕೀಲರು: ಏನದು? - Mahanayaka

ಪೊಲೀಸ್ ತನಿಖೆಯಲ್ಲಿ ಹಲವು ತಪ್ಪು ನಡೆದಿವೆ ಎಂದ ದರ್ಶನ್ ಪರ ವಕೀಲರು: ಏನದು?

darshan
05/10/2024


Provided by

ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಹಲವು ಲಾ ಪಾಯಿಂಟ್ ಗಳನ್ನು ಇಟ್ಟಿದ್ದು, ಪೊಲೀಸರ ತನಿಖೆಯಲ್ಲಿ ಒದಗಿಸಿರುವ ಸಾಕ್ಷಿಗಳು ಸುಳ್ಳು ಎನ್ನಲು  ಹಲವು ವಿಚಾರಗಳನ್ನು ಅವರು ಮುಂದಿಟ್ಟಿದ್ದಾರೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ದರ್ಶನ್ ಪರ ವಾದ ಮಂಡನೆ ಆರಂಭಿಸಿದ್ದಾರೆ.  ಪೊಲೀಸ್ ತನಿಖೆಯಲ್ಲಿ ತಪ್ಪು ನಡೆದಿದೆ ಎನ್ನುವ ವಾದವನ್ನು ನಾಗೇಶ್ ಅವರು ಕೋರ್ಟ್ ಮುಂದಿಟ್ಟಿದ್ದಾರೆ.

ಪೊಲೀಸರು ದರ್ಶನ್ ವಿರುದ್ಧ ಯಾವ ರೀತಿ ಸಾಕ್ಷ್ಯ ಕಲೆ ಹಾಕಿದರು ಎಂಬ ಬಗ್ಗೆ ವಾದ ಮುಂದುವರಿಸಿದ ಅವರು, ರೇಣುಕಾಸ್ವಾಮಿ ಪ್ರಕರಣ ನಡೆದ ಜಾಗದಲ್ಲಿ ಮಣ್ಣು ಸಂಗ್ರಹಿಸಿ ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿದಾಗ ಅದರಲ್ಲಿ ರಕ್ತದ ಮಾದರಿಯಿತ್ತು ಎಂಬ ವರದಿ ಬಂದಿದೆ. ಆದರೆ ಪಂಚನಾಮೆಯಲ್ಲಿ ಇಲ್ಲದ್ದು ಇಲ್ಲಿ ಹೇಗೆ ಬಂತು? ದರ್ಶನ್ ಹೇಳಿಕೆಯಲ್ಲಿ ಚಪ್ಪಲಿಯೇ ಶೂ ಆಗಿರುವಾಗ ಇದರಲ್ಲಿ ಏನೂ ವಿಶೇಷವಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಎ14 ಮೊಬೈಲ್ ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿತ್ತು. ಆ ಫೋಟೋವನ್ನು ರಿಟ್ರೀವ್ ಮಾಡಿರುವುದಾಗಿ ಪೊಲೀಸರು ಹೇಳಿದ್ದರು.  ಪಿಎಸ್ ಐ ವಿನಯ್ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ.ಆದರೆ ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್ ಐ ವಿನಯ್. ಆದರೆ ವಿನಯ್ ಫೋನ್ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಕ್ಲಾಸಿಕಲ್ ತನಿಖೆ ಎಂದು ಹೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.

ರೇಣುಕಾಸ್ವಾಮಿ ಮೃತದೇಹವನ್ನು ರಸ್ತೆಬದಿಯಲ್ಲಿ ಬಿಸಾಡಲಾಗಿತ್ತು. ಜೂನ್ 10 ರಂದು ದೂರು ದಾಖಲಿಸಲಾಗಿದೆ. ತಕ್ಷಣವೇ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂನ್ 11 ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೆ ಮಾಡಿದ್ಯಾಕೆ ಎಂಬ ಪ್ರಶ್ನೆಯಿದೆ. ಪೋಸ್ಟ್ ಮಾರ್ಟಂ ಕೂಡಾ ಜೂನ್ 11 ರ ಮಧ್ಯಾಹ್ನ 2:45 ಕ್ಕೆ ಮಾಡಲಾಗಿದೆ. ಇದಕ್ಕೆ ದೇಹದ ಐಡೆಂಟಿಟಿ ಆಗಲಿಲ್ಲ ಎಂದು ಕಾರಣ ನೀಡಿದ್ದಾರೆ. ಆದರೆ ಮಹಜರು, ಪೋಸ್ಟ್ ಮಾರ್ಟಂ ಮಾಡಲು ದೇಹದ ಐಡೆಂಟಿಟಿ ಯಾಕೆ ಬೇಕು ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ