ದಸರಾ ಸಂದರ್ಭದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಾರಾಣಿ ತ್ರಿಷಿಕಾ - Mahanayaka
10:57 AM Saturday 18 - October 2025

ದಸರಾ ಸಂದರ್ಭದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಾರಾಣಿ ತ್ರಿಷಿಕಾ

maharani trishika
11/10/2024

ಮೈಸೂರು: ಯದುವಂಶದ ಮಹಾರಾಣಿ ತ್ರಿಷಿಕಾ ಇಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಾಡ ಹಬ್ಬ ದಸರಾ ಸಂದರ್ಭದಲ್ಲೇ ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆಯಿಂದ ಸಂಭ್ರಮ ಇಮ್ಮಡಿಯಾಗಿದೆ.


Provided by

ಮೈಸೂರಿನ ಯಾದವಗಿರಿಯಲ್ಲಿರುವ ಮದರ್ ಹುಡ್ ಆಸ್ಪತ್ರೆಯಲ್ಲಿ ತ್ರಿಷಿಕಾದೇವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಯುವರಾಜ ಆದ್ಯವೀರ್‌ಗೆ ಸಹೋದರ ಸಿಕ್ಕಿದ್ದು ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.

ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ. ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ. ಈಗ ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತಂತೆ ಮುಂದಿನ ಪೂಜಾ ವಿಧಿ ವಿಧಾನಗಳನ್ನ ಮುಂದುವರೆಸುವ ಬಗ್ಗೆ ಅರಮನೆ ಪುರೋಹಿತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಮನೆ ಮೂಲಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ