ಮಕ್ಕಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಕೇಸ್: ಪೊಲೀಸರಿಂದ ಏಕ್ತಾ ಕಪೂರ್ ವಿಚಾರಣೆ
ಎಎಲ್‌ಟಿ ಬಾಲಾಜಿಯವರ ವೆಬ್ ಸರಣಿ ‘ಗಂಡಿ ಬಾತ್’ ಸಂಚಿಕೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಒಳಗೊಂಡ ಅನುಚಿತ ದೃಶ್ಯಗಳನ್ನು ತೋರಿಸಿದ ಆರೋಪದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ರು.
ಇಂದು ನಡೆದ ವಿಚಾರಣೆಯ ನಂತರ, ಗುರುವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಈ ಸರಣಿಯಲ್ಲಿ ನಟಿಸಿರುವ ನಟರ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ಕೋರಿದ್ದಾರೆ. ಮುಂಬೈ ಪೊಲೀಸರ ಹೇಳಿಕೆಯ ಪ್ರಕಾರ, ಅವರು ಚಿತ್ರದ ನಟರು ಮತ್ತು ನಿರ್ದೇಶಕರ ಹೇಳಿಕೆಯನ್ನು ಸಹ ದಾಖಲಿಸುತ್ತಾರೆ.
ಎಎಲ್ಟಿ ಬಾಲಾಜಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ತರಲು ಪೊಲೀಸರು ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಅವರನ್ನು ಕೇಳಿದ್ದಾರೆ.
ಈ ಹಿಂದೆ ಮುಂಬೈ ಪೊಲೀಸರು ಏಕ್ತಾ ಕಪೂರ್, ಶೋಭಾ ಕಪೂರ್ ಮತ್ತು ಎಎಲ್ಟಿ ಬಾಲಾಜಿ ಕಂಪನಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಒಟಿಟಿ ಪ್ಲಾಟ್ಫಾರ್ಮ್ ಎಎಲ್ಟಿ ಬಾಲಾಜಿಯಲ್ಲಿ ಪ್ರಸಾರವಾಗುತ್ತಿರುವ ‘ಗಂಡಿ ಬಾತ್’ ವೆಬ್ ಸರಣಿಯ ಸೀಸನ್ 6ಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಫೆಬ್ರವರಿ 2021 ಮತ್ತು ಏಪ್ರಿಲ್ 2021 ರ ನಡುವೆ ಎಎಲ್ಟಿ ಬಾಲಾಜಿಯಲ್ಲಿ ಪ್ರಸಾರವಾದ ಈ ಸರಣಿಯು ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























