ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ! - Mahanayaka
8:29 PM Wednesday 17 - December 2025

ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ!

private part
20/03/2021

ಮಧ್ಯಪ್ರದೇಶ: ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನೇ ಮಹಿಳೆಯೊಬ್ಬರು ಕತ್ತರಿಸಿದ ಘಟನೆ ಮಧ್ಯಪ್ರದೇಶದ ಸಿಧಿಯ ಜಿಲ್ಲಾ ಕೇಂದ್ರದಿಂದ  50 ಕಿ.ಮೀ. ದೂರದಲ್ಲಿರುವ ಉಮಾರಿಹಾ ಗ್ರಾಮದಲ್ಲಿ ನಡೆದಿದೆ.

ಘಟನೆಯ ಬಳಿಕ ಮಹಿಳೆಯೇ ಪೊಲೀಸರಿಗೆ ದೂರು ನೀಡಿದ್ದು, 45 ವರ್ಷ ವಯಸ್ಸಿನ ಮಹಿಳೆ ತನ್ನ 13 ವರ್ಷ ವಯಸ್ಸಿನ ಮಗ ಹಾಗೂ ಪತಿಯೊಂದಿಗೆ ವಾಸವಿದ್ದರು. ಆ ದಿನ ಮಹಿಳೆಯ ಪತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೋರ್ವ ಮನೆಯೊಳಗೆ ನುಗ್ಗಿದ್ದಾನೆ. ಈ ವೇಳೆ ಆತ ಕಳ್ಳ ಎಂದು ಅಂದುಕೊಂಡು ಮಹಿಳೆ ಮತ್ತು ಮಗ ಮನೆಯಿಂದ ಹೊರ ಓಡಿಹೋಗಿದ್ದು, ಆದರೆ, ಆತ ಮಹಿಳೆಯನ್ನು ಹಿಂಬಾಳಿಸಿ ಥಳಿಸಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಹಾಸಿಗೆಯಲ್ಲಿದ್ದ ಕುಡುಗೋಲು ಎತ್ತಿಕೊಂಡು ಆರೋಪಿಯ ಮರ್ಮಾಂಗವನ್ನು ಕತ್ತರಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯನ್ನು  ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ